ಮೂಡುಬಿದಿರೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣ : ಪತ್ತೆಗೆ ಪೊಲೀಸರ ಶೋಧ

0
32

ಮೂಡುಬಿದಿರೆ : ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಕಡದಬೆಟ್ಟು ಎಂಬಲ್ಲಿ ವಾಸವಿದ್ದ 28 ವರ್ಷದ ಭುವನೇಶ್ವರಿ ಎಂಬ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಗದಗ ಜಿಲ್ಲೆಯವರಾದ ಭುವನೇಶ್ವರಿ ಅವರು ತಮ್ಮ ಪತಿಯೊಂದಿಗೆ ಕಡದಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರು ಮೂಡುಬಿದಿರೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ನವೆಂಬರ್ 10ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಪತಿ ಅವರನ್ನು ಕೆಲಸದ ಸ್ಥಳಕ್ಕೆ ಬಿಟ್ಟು ಹೋಗಿದ್ದರು. ಪ್ರತಿದಿನ ಸಂಜೆ 6.30ರ ವೇಳೆಗೆ ಮನೆಗೆ ಮರಳುತ್ತಿದ್ದ ಭುವನೇಶ್ವರಿ ಅವರು ಅಂದು ರಾತ್ರಿ 8 ಗಂಟೆಯಾದರೂ ಮನೆಗೆ ವಾಪಸಾಗಿರಲಿಲ್ಲ. ಬಳಿಕ ಪತಿ ಸಂಬಂಧಿಕರ ಮನೆಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಪತ್ತೆಹಚ್ಚಿಕೊಡುವಂತೆ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಾಪತ್ತೆಯಾದ ಮಹಿಳೆಯ ಚಹರೆ ವಿವರ:

  • ಹೆಸರು: ಭುವನೇಶ್ವರಿ
  • ವಯಸ್ಸು: 28 ವರ್ಷ
  • ಎತ್ತರ: ಸುಮಾರು 4.5 ಅಡಿ
  • ಮೈಬಣ್ಣ: ಎಣ್ಣೆ ಕಪ್ಪು
  • ಮುಖ: ಉರುಟು ಮುಖ
  • ಕೂದಲು: ಗುಂಗುರು ಕೂದಲು
  • ಮೈಕಟ್ಟು: ಸಪೂರ ಶರೀರ
  • ಮಾತನಾಡುವ ಭಾಷೆ: ಕನ್ನಡ

ಧರಿಸಿದ್ದ ಉಡುಪು: ಕುಂಕುಮ ಬಣ್ಣದ ಚೂಡಿದಾರ್ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಶಾಲು ಧರಿಸಿದ್ದು, ಸಣ್ಣ ಸ್ಕೂಲ್ ಬ್ಯಾಗ್ ಹೊಂದಿದ್ದರು.

ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 157/2026ರಂತೆ ಪ್ರಕರಣ ದಾಖಲಾಗಿದೆ.

ಭುವನೇಶ್ವರಿ ಅವರ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ತಕ್ಷಣ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಪೊಲೀಸರಿಗೆ ಮಾಹಿತಿ ನೀಡುವಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:

  • ಮೂಡುಬಿದಿರೆ ಪೊಲೀಸ್ ಠಾಣೆ: 08258-236333
  • ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ: 0824-2220801 / 2220800

ಮಹಿಳೆಯ ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.