ಮಕ್ಕಳ ದಿನದ ಸಲುವಾಗಿ ಐಲೇಸಾ ದಿಂದ ಅಯ್ಯಪ್ಪ ಭಕ್ತಿ ಗೀತೆ ”ಸನ್ನಿಧಾನ” ಬಿಡುಗಡೆ

0
12

ಮಂಗಳೂರು : ಐ ಲೇಸಾ – ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆಯ ವತಿಯಿಂದ ಸುಧಾಕರ್ ಶೆಟ್ಟಿ ಅವರ ಪರಿಕಲ್ಪನೆ ಹಾಗೂ ಗಾಯನದಲ್ಲಿ ಮೂಡಿಬಂದಿರುವ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆ ‘ಸನ್ನಿಧಾನ’ ಕನ್ನಡ ಆವೃತ್ತಿಯು ಇದೇ ನವೆಂಬರ್ 15,ರವಿವಾರ 2026ರಂದು ಸಂಜೆ 7:30ಕ್ಕೆ ಡಾ. ಸಂತೋಷ್ ಗುರೂಜಿ ಅವರ ದಿವ್ಯ ಹಸ್ತದಿಂದ Zoom ಡಿಜಿಟಲ್ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಮೂಲತಃ ಮಲಯಾಳಂ ಭಾಷೆಯಲ್ಲಿ ಮೂಡಿಬಂದಿರುವ ಈ ಸುಂದರ ಭಕ್ತಿಗೀತೆಗೆ ಕನ್ನಡ ಸಾಹಿತ್ಯವನ್ನು ರಚಿಸಿ ಸುಧಾಕರ್ ಶೆಟ್ಟಿ ಅವರೇ ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ್ದಾರೆ.

ಹಾಡಿನ ನೃತ್ಯ ಸಂಯೋಜನೆಯನ್ನು ವಿದ್ಯಾಜ್ಯೋತಿ ಶಾಲೆಯ ಪ್ರಾಂಶುಪಾಲರಾದ ಮಾಲತಿ ಅವರು ನಿರ್ವಹಿಸಿದ್ದಾರೆ. ಈ ವಿಶೇಷ ಪ್ರಯತ್ನಕ್ಕೆ ಟ್ರಸ್ಟಿ ಹರಿದಾಸನ್, ಸವಿತಾ ಸುಧಾಕರ್ ಶೆಟ್ಟಿ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಉಪ್ಪಳ ರಾಜಾರಾಮ್ ಶೆಟ್ಟಿ ಅವರು ಈ ಹಾಡನ್ನು ನಿರ್ಮಿಸಿದ್ದಾರೆ.

ಈ ವಿಶೇಷ ಕಾರ್ಯಕ್ರಮದಲ್ಲಿ ‘ಪ್ರೇಮದ ಊರಿನಲ್ಲಿ’ ತಂಡದ ಪುಟಾಣಿ ಕಲಾವಿದರು ಹಾಗೂ ಶಿಕ್ಷಕಿ ವಂದನಾ ರೈ ಕೂಡ ಭಾಗವಹಿಸಲಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪ್ರಾಪ್ತಿ ರಮೇಶ್ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕಾರ್ಯಕ್ರಮದ ನಡುವೆ ರಮೇಶಚಂದ್ರ ಅವರ ಗಾಯನ ಕಾರ್ಯಕ್ರಮವೂ ಇರಲಿದೆ.

ಕಾರ್ಯಕ್ರಮದ ಸ್ವಾಗತವನ್ನು ಸವಿತಾ ಸುಧಾಕರ್ ಶೆಟ್ಟಿ ನೆರವೇರಿಸಲಿದ್ದು, ಸ್ವಾಗತ ಹಾಗೂ ಪರಿಚಯದ ಜವಾಬ್ದಾರಿಯನ್ನು ಐ ಲೇಸಾದ ಅನಂತ್ ರಾವ್ ವಹಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮವನ್ನು ಐ ಲೇಸಾದ ಸ್ವರ ಸೂರಿ ಅವರು ನಿರೂಪಿಸಲಿದ್ದಾರೆ. ಕಾರ್ಯಕ್ರಮದ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿಯನ್ನು ಐ ಲೇಸಾದ ಗೋಪಾಲ್ ಪಟ್ಟೆ ಅವರು ವಹಿಸಿಕೊಳ್ಳಲಿದ್ದಾರೆ.

15-11-2026, ಭಾನುವಾರ ಸಂಜೆ 7:30 ಡಿಜಿಟಲ್ ಈ ZOOM ವೇದಿಕೆಯಲ್ಲಿ ಬಿಡುಗಡೆಯಾಗುವ ಭಕ್ತಿಪೂರ್ಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ Zoom ID: 6312386199 Passcode: 1225 ಉಪಯೋಗಿಸಿ ಎಲ್ಲರೂ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಮುಂಬೈ ಐ ಲೇಸಾದ ಸೂರಿ ಮಾರ್ನಾಡ್ ಅವರು ವಿನಮ್ರವಾಗಿ ವಿನಂತಿಸಿದ್ದಾರೆ.