2026ರ ಅಜ್ಜಿಕುಟ್ಟಿರ ಕೊಡವ ಕೌಟುಂಬಿಕ ಹಾಕಿ ಉತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರಿಂದ ಪತ್ರಿಕಾ ಪ್ರಕಟಣೆ

0
5

ವಿರಾಜಪೇಟೆ: ಕೊಡವ ಕೌಟಂಬಿಕ ಹಾಕಿ ಪಂದ್ಯಾವಳಿ (Kodava Family Hockey Festival) ಕೇವಲ ಒಂದು ಕ್ರೀಡಾಕೂಟವಲ್ಲ, ಇದು ಕೊಡವರ ಸಂಸ್ಕೃತಿ, ಕುಟುಂಬ ಪರಂಪರೆ, ಆಚಾರ, ಒಗ್ಗಟ್ಟು, ಕ್ರೀಡಾ ಸ್ಫೂರ್ತಿ ಮತ್ತು ಹಾಕಿ ಕ್ರೀಡೆಯ ಮೇಲಿನ ಅಪಾರ ಪ್ರೀತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಕ್ರೀಡಾ ಉತ್ಸವವಾಗಿದೆ.
27ನೇ ವರ್ಷದ ಐತಿಹಾಸಿಕ ಅದ್ದೂರಿ ಕೊಡವ ಕೌಟಂಬಿಕ ಹಾಕಿ ಪಂದ್ಯಾವಳಿಯ ಅತಿಥ್ಯವನ್ನು ಈ ವರ್ಷ(೨೦೨೬) ಹುದಿಕೇರಿ ಅಜ್ಜಿಕುಟ್ಟಿರ ಕುಟುಂಬ ವಹಿಸಿಕೊಂಡಿದೆ.

ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ:22.11.2026 ರಂದು ಸಂಜೆ:06.00 ಗಂಟೆಗೆ ಬೆಂಗಳೂರಿನ ಹಕ್ಕಿತಿಮ್ಮನಹಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಹಾಕಿ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ಮಾನ್ಯ ವಿರಾಜಪೇಟೆಯ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಂಛನವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು ಬಿಡುಗಡೆ ಮಾಡಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂಧನ ಹಾಗೂ ಪ್ರವಾಸೋಧ್ಯಮ ಸಚಿವರಾದ ಸನ್ಮಾನ ಕೆ.ಜೆ ಜಾರ್ಜ್ , ಮಾನ್ಯ ಕೃಷಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ನರೇಂದ್ರಸ್ವಾಮಿ,ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ, ಎ.ಎಸ್ ಬೊಪಣ್ಣ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ವಿಧಾನ ಪರಿಷತ್ತಿನ ಸದಸ್ಯರಾದ ಸುಜಾ ಕುಶಾಲಪ್ಪ , ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಹಾಗೂ ಅಜ್ಜಿಕುಟ್ಟಿರ ಕುಟುಂಬದ ಕೌಟಂಬಿಕ ಹಾಕಿ ಪಂದ್ಯಾವಳಿಯ ಅಧ್ಯಕ್ಷರಾದ ನರೇನ್ ಕಾರಿಯಪ್ಪ, ಕುಟುಂಬದ ಅಧ್ಯಕ್ಷರಾದ ಅಜ್ಜಿಕುಟೀರ ಚಂಗಪ್ಪ ( ಸಜನ್) ಹಾಗೂ ಇತರೆ ಗಣ್ಯರು ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಹಾಕಿ ಕೇತ್ರದಲ್ಲಿ ರಾಷ್ರ್ಟೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಮಾಡಲಾಗುವುದೆಂದು ತಿಳಿಸಿದ್ದಾರೆ.

ವರದಿ: ಪ್ರಿತುನ್ ಪೂವಣ್ಣ