ಶ್ರೀ ವಿಠೋಬಾ ರುಕುಮಾಯಿ ದೇವರಿಗೆ ಬಾಳಂ ಭಟ್ ಮನೆತನದವರಿಂದ ರಥ ಸಮರ್ಪಣೆ; ವೈಭವದ ರಥೋತ್ಸವ

0
6

-ಮಂದಾರ ರಾಜೇಶ್ ಭಟ್

ಮೂಡುಬಿದಿರೆ ಸಮೀಪದ ಗುಂಡ್ಯಡ್ಕ ಶ್ರೀನಿವಾಸಪುರದ ಶ್ರೀ ವಿಠೋಬಾ ರುಕುಮಾಯಿ ದೇವರಿಗೆ ಬಾಳಂ ಭಟ್ ಮನೆತನದವರಿಂದ ನೂತನ ರಥವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.

ದೇವರ ಮೇಲಿನ ನಿರ್ಮಲ ಭಕ್ತಿ ಹಾಗೂ ಧಾರ್ಮಿಕ ಪರಂಪರೆಯ ಮೇಲಿನ ಗೌರವಕ್ಕೆ ಸಾಕ್ಷಿಯಾದ ಈ ಪುಣ್ಯ ಕಾರ್ಯಕ್ರಮವು ನವೆಂಬರ್ 16ರಂದು ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವೈಭವದಿಂದ ನೆರವೇರಿತು.

ಮಂಗಳೂರಿನ ಶ್ರೀ ರಾಧಾಕೃಷ್ಣ ದೇವಳದ ಬಾಳಂ ಭಟ್ ಮನೆತನದ ಕೀರ್ತಿಶೇಷ ಡಾ. ಎಂ. ನಾರಾಯಣ ಭಟ್ ಪರಾಡ್ಕರ್ ಹಾಗೂ ಕೀರ್ತಿಶೇಷ ಶ್ರೀಮತಿ ಪದ್ಮಾವತಿ ನಾರಾಯಣ ಭಟ್ ಪರಾಡ್ಕರ್ ಅವರ ಸುಪುತ್ರ ವೇದಮೂರ್ತಿ ಎಂ. ಗಿರಿಧರ ಭಟ್ ಪರಾಡ್ಕರ್ ಮತ್ತು ಶ್ರೀಮತಿ ರಾಧಾ ಗಿರಿಧರ ಭಟ್ ಪರಾಡ್ಕರ್ ಅವರು ಭಕ್ತಿಸೇವೆಯ ಸಂಕೇತವಾಗಿ ನೂತನ ರಥವನ್ನು ದೇವಸ್ಥಾನಕ್ಕೆ ಸಮರ್ಪಿಸಿದರು.

ರಥ ಸಮರ್ಪಣೆಯ ಧಾರ್ಮಿಕ ವಿಧಿವಿಧಾನಗಳಲ್ಲಿ ಎಂ. ಕೇಶವ ಭಟ್ ಪರಾಡ್ಕರ್, ಶ್ರೀಮತಿ ಭಟ್ ಪರಾಡ್ಕರ್, ವಿದ್ವಾನ್ ಡಾ. ಸತ್ಯಕೃಷ್ಣ ಭಟ್ ಪರಾಡ್ಕರ್, ಶ್ರೀಮತಿ ಕೀರ್ತನಾ ಭಟ್, ಬಾಲಕೃಷ್ಣ ಭಟ್ ಪರಾಡ್ಕರ್, ಕುಮಾರಿ ಭಾರ್ಗವಿ ಭಟ್, ಮುಕುಲ್ ಕೃಷ್ಣ ಭಟ್ ಹಾಗೂ ಮಿಥಿಲ್ ಕೃಷ್ಣ ಭಟ್ ಭಾಗವಹಿಸಿದರು.

ಈ ಪುಣ್ಯ ಸಮಾರಂಭದ ಅಂಗವಾಗಿ ರಥಶುದ್ಧಿ, ವಾಸ್ತುಪೂಜೆ, ಗಣಪತಿ ಹೋಮ, ಲಕ್ಷ್ಮೀನಾರಾಯಣ ಪ್ರಧಾನ ಹೋಮ, ರಥ ಸಮರ್ಪಣೆ, ಮಹಾಪೂಜೆ ಹಾಗೂ ಶ್ರೀ ದೇವರ ರಥಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ವೇದಮಂತ್ರಗಳ ಘೋಷ, ಮಂಗಳವಾದ್ಯಗಳ ನಾದ ಹಾಗೂ ಭಕ್ತರ ಜಯಘೋಷಗಳ ನಡುವೆ ಶ್ರೀ ದೇವರ ರಥೋತ್ಸವ ವೈಭವದಿಂದ ನಡೆಯಿತು.

ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ವಿಠೋಬಾ ರುಕುಮಾಯಿ ದೇವರ ದರ್ಶನ ಪಡೆದರು
ಬಳಿಕ ಪ್ರಸಾದ ಸ್ವೀಕರಿಸಿದರು

ನೂತನ ರಥ ಸಮರ್ಪಣೆಯು ಕ್ಷೇತ್ರದ ಧಾರ್ಮಿಕ ಮತ್ತು ಉತ್ಸವ ಪರಂಪರೆಗೆ ಹೊಸ ಮೆರುಗು ನೀಡಿದೆ. ಮುಂದಿನ ಪೀಳಿಗೆಗೂ ಕ್ಷೇತ್ರದ ಸಂಪ್ರದಾಯ ಮತ್ತು ಉತ್ಸವ ವೈಭವವನ್ನು ಉಳಿಸಿ ಬೆಳೆಸುವ ಸಾರ್ಥಕ ಪ್ರಯತ್ನವಾಗಿ ಈ ಸಮರ್ಪಣೆ ಸ್ಮರಣೀಯವಾಗಿದೆ.