ಮೂಡುಬಿದಿರೆ ಪ್ರತಿಭಾ ಕಾರಂಜಿಯಲ್ಲಿ ಪ್ರೇರಣಾ ಶಾಲೆಯ ಹ್ಯಾಟ್ರಿಕ್ ಸಾಧನೆ

0
5

ಮೂಡುಬಿದಿರೆ ಮೈನ್ ಕ್ಲಸ್ಟರ್ ಮಟ್ಟದ ” ಪ್ರತಿಭಾ ಕಾರಂಜಿ – 2026 – 27 ” ರ ಹಿರಿಯ ಹಾಗೂ ಕಿರಿಯ ವಿಭಾಗದಲ್ಲಿ ಕಡಲಕೆರೆ ಮೂಡುಬಿದಿರೆಯ ಪ್ರೇರಣಾ ಶಾಲೆಗೆ ” ಸಮಗ್ರ ಪ್ರಶಸ್ತಿ ” ದೊರಕಿದೆ . ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಕೋಟೆಬಾಗಿಲು , ಮೂಡುಬಿದಿರೆಯಲ್ಲಿ ಜರುಗಿದ ಮೂಡುಬಿದಿರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ , ಸತತ ಮೂರು ವರ್ಷಗಳಿಂದ ಈ ಸಾಧನೆ ಮಾಡಿ ” ಹ್ಯಾಟ್ರಿಕ್ ” ಸಾಧಿಸುವ ಮೂಲಕ ಪ್ರೇರಣಾ ಶಾಲಾ ವಿಧ್ಯಾರ್ಥಿಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ .

ಸುಮಾರು 10 ಶಾಲೆಗಳು ಭಾಗವಹಿಸಿದ್ದ ಈ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಹಾಗೂ ಕಿರಿಯ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಪ್ರೇರಣಾ ಶಾಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರು 11 ಪ್ರಥಮ , 5 ದ್ವಿತೀಯ ಹಾಗೂ 2 ತೃತೀಯ , ಒಟ್ಟಾಗಿ 18 ಬಹುಮಾನ ಗಳಿಸಿ ಹೊಸ ದಾಖಲೆ ನಿರ್ಮಿಸುವ ಮೂಲಕ ತಮ್ಮ ಪಾರಮ್ಯ ಮೆರೆದಿದ್ದಾರೆ .

ಪ್ರೇರಣಾ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ದ್ಯೋತಕವಾಗಿ ಶಾಲೆಯ 11 ಮಂದಿ ವಿಧ್ಯಾರ್ಥಿಗಳು ತಾಲೂಕು ಮಟ್ಟದ ” ಪ್ರತಿಭಾ ಕಾರಂಜಿ ” ಗೆ ಆಯ್ಕೆಯಾಗಿದ್ದಾರೆ . ಕಳೆದ ವರ್ಷದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದಲ್ಲಿ 150 ಕ್ಕೂ ಅಧಿಕ ಪ್ರಶಸ್ತಿ – ಬಹುಮಾನ ಗಳಿಸಿ ಪ್ರೇರಣಾ ಶಾಲೆಯ ವಿದ್ಯಾರ್ಥಿಗಳು ಗಮನ ಸೆಳೆದಿದ್ದರು . ಕು . ಪ್ರೀತಿ ಈಜು ವಿಭಾಗದಲ್ಲಿ ರಾಷ್ಟಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದರೆ , ಹಲವಾರು ವಿಧ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ಬಹುಮಾನ ಗಳಿಸಿದ್ದರು . ಪ್ರಸಕ್ತ ಸಾಲಿನಲ್ಲೂ ಇಲ್ಲಿನ ತನಕ 80 ಕ್ಕೂ ಮಿಕ್ಕಿ ಬಹುಮಾನಗಳು ದೊರಕಿದ್ದು , ಇನ್ನೂ ಹಲವಾರು ಸ್ವರ್ಧೆಗಳಿರುವ ಕಾರಣ ಇನ್ನಷ್ಟು ದೊರಕುವ ನಿರೀಕ್ಷೆ ಇದೆ .
ಪ್ರೇರಣಾ ಶಾಲೆಯ ವಿಧ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗಳಿಸಲು ಶಾಲೆಯ ಎಲ್ಲಾ ಶಿಕ್ಷಕ – ಶಿಕ್ಷಕಿಯರ ತರಬೇತಿ ಕಾರಣವಾಗಿದೆ .

” ಈ ವರ್ಷವೂ ಸಮಗ್ರ ಪ್ರಶಸ್ತಿಯು ನಮ್ಮ ಶಾಲೆಗೇ ದೊರಕಬೇಕು ಎಂಬ ನಮ್ಮ ಪ್ರಯತ್ನ ಸಾಕಾರಗೊಂಡಿರುವುದು ತುಂಬಾ ಸಂತೋಷ ನೀಡಿದೆ ” ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ವತ್ಸಲಾ ರಾಜೇಶ್ , ಶಿಕ್ಷಕರಾದ ಸುರೇಂದ್ರ , ಪ್ರಶಾಂತ್ ಭಟ್ , ಶಿಕ್ಷಕಿಯರಾದ ಶಶಿಕಲಾ ಕೋಟ್ಯಾನ್ , ಹರ್ಷಿತಾ , ಶಶಿಕಲಾ ಇರುವೈಲು , ಪುಷ್ಪಾ ಹೆಗ್ಡೆ , ಸುಚಿತ್ರಾ , ಪ್ರಿಯಾ ಬಂಗೇರಾ , ಗ್ರೀಷ್ಮಾ , ಮಲ್ಲಿಕಾ , ಮಯೂರಿ , ನಿವೇದಿತಾರು ಹಾಗೂ ಶಾಲಾ ವಾಹನಗಳ ಎಲ್ಲಾ ಚಾಲಕರು , ಆಯಾ , ಅಡುಗೆ ಸಿಬ್ಬಂದಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ ‌. ಶಾಲಾ ಸಂಚಾಲಕರಾದ ಎಂ.ಶಾಂತರಾಮ ಕುಡ್ವ , ಅಧ್ಯಕ್ಷರಾದ ರಾಜೇಶ್ ಬಂಗೇರಾರವರು ಹಾಗೂ ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು ವಿಧ್ಯಾರ್ಥಿಗಳಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ ‌.