ದಿವ್ಯಾಂಗರು ಮತ್ತು ಅಶಕ್ತರಿಗೆ ಆಹಾರ ಕಿಟ್ ವಿತರಣೆ, ಬೆನ್ನುಹುರಿ ಅಪಘಾತದ ಕುರಿತು ಮಾಹಿತಿ ಕಾರ್ಯಾಗಾರ

0
6

ಉಡುಪಿ : ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು, ಉಡುಪಿ ಜಿಲ್ಲೆ ಹಾಗೂ 52 ನೇ ಕಾರ್ಯಕ್ರಮದ ಎಂ.ಸಿ.ಕೆ.ಎಸ್. ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್, ಬೆಂಗಳೂರು ಇವರ ಆಶ್ರಯದಲ್ಲಿ ಆಯ್ದ ದಿವ್ಯಾಂಗರು ಮತ್ತು ಅಶಕ್ತರಿಗೆ ಆಹಾರ ಕಿಟ್ ವಿತರಣೆ ಹಾಗೂ ಬೆನ್ನುಮೂಳೆ ಮತ್ತು ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ನವೆಂಬರ್ 22ರ ಭಾನುವಾರ ಮಧ್ಯಾಹ್ನ 2.30ಕ್ಕೆ ಕೊಡವೂರು ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ.

ಕಾರ್ಯಾಗಾರದಲ್ಲಿ ಸೇವಾಧಾಮ ಟ್ರಸ್ಟ್‌ನ ಉಡುಪಿ ಜಿಲ್ಲಾ ಕ್ಷೇತ್ರ ಸಂಯೋಜಕಿ ಕವಿತಾ ಯು. ಪೂಜಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಬೆನ್ನುಮೂಳೆ ಮತ್ತು ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಆರೈಕೆ, ಅಗತ್ಯ ಮಾಹಿತಿ ಹಾಗೂ ಲಭ್ಯವಿರುವ ನೆರವಿನ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಆಯ್ದ ದಿವ್ಯಾಂಗರು ಮತ್ತು ಅಶಕ್ತರಿಗೆ ಆಹಾರ ಕಿಟ್ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಅಧ್ಯಕ್ಷ ಹರೀಶ್ ಕೊಪ್ಪಲ್ ತೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.