ಮಂಗಳೂರು: ಸುಮಾರು 15 ವರ್ಷಗಳಿಂದ ತೀವ್ರ ಸಮೀಪದೃಷ್ಟಿ (ಹೈ ಮಯೋಪಿಯಾ) ಸಮಸ್ಯೆಯಿಂದ ಬಳಲುತ್ತಾ, ದಪ್ಪ ಕನ್ನಡಕಗಳನ್ನು ಅವಲಂಬಿಸಿದ್ದ 30 ವರ್ಷದ ಅಕೌಂಟೆಂಟ್ ಶ್ರೀಮತಿ ತುಳಸಿ ಅವರು, ಮಂಗಳೂರಿನ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಫೇಕಿಕ್ ICL ಶಸ್ತ್ರಚಿಕಿತ್ಸೆ (ಇಂಪ್ಲಾಂಟೇಬಲ್ ಕೊಲಮರ್ ಲೆನ್ಸ್) ಮಾಡಿಸಿಕೊಂಡ ಬಳಿಕ ಕನ್ನಡಕವಿಲ್ಲದೆ ಸ್ಪಷ್ಟವಾಗಿ ನೋಡುವಂತಾಗಿದ್ದಾರೆ.
ಶ್ರೀಮತಿ ತುಳಸಿ ಅವರ ಬಲಗಣ್ಣಿನ ಕನ್ನಡಕದ ಪವರ್ -11.25 ಡಯಾಪ್ಟರ್ ಹಾಗೂ ಎಡಗಣ್ಣಿನ ಪವರ್ -7.75 ಡಯಾಪ್ಟರ್ ಇತ್ತು. ಅಕೌಂಟೆಂಟ್ ವೃತ್ತಿಯಲ್ಲಿ ಕಂಪ್ಯೂಟರ್ ಬಳಕೆ, ದಾಖಲೆಗಳ ಓದು ಮತ್ತು ಲೆಕ್ಕಪತ್ರ ನಿರ್ವಹಣೆ ಅಗತ್ಯವಾಗಿದ್ದು, ದಪ್ಪ ಕನ್ನಡಕ ಧರಿಸಿ ಕೆಲಸ ಮಾಡುವುದು ಕಷ್ಟಕರವಾಗಿತ್ತು. ಜೊತೆಗೆ ಸಾಮಾಜಿಕವಾಗಿಯೂ ಮುಜುಗರ ಎದುರಿಸುತ್ತಿದ್ದರು.
ದೀರ್ಘಕಾಲೀನ ಪರಿಹಾರಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡಿದ ಅವರಿಗೆ, ಸಮಗ್ರ ತಪಾಸಣೆ ಬಳಿಕ ಫೇಕಿಕ್ ICL ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದರು. ಸಾಮಾನ್ಯ ಲೇಸರ್ ವಿಧಾನಗಳಿಗಿಂತ ಭಿನ್ನವಾಗಿ, ಈ ಶಸ್ತ್ರಚಿಕಿತ್ಸೆಯಲ್ಲಿ ಕಣ್ಣಿನ ನೈಸರ್ಗಿಕ ಮಸೂರವನ್ನು ತೆಗೆದುಹಾಕದೆ, ವಿಶೇಷ ಮಸೂರವನ್ನು ಕಣ್ಣಿನೊಳಗೆ ಅಳವಡಿಸಲಾಗುತ್ತದೆ. ಡಾ. ಅದಿತಿ ಸಿಂಗ್ ಅವರು 2026ರ ಜುಲೈ 15ರಂದು ಬಲಗಣ್ಣಿಗೆ ಹಾಗೂ ಜುಲೈ 16ರಂದು ಎಡಗಣ್ಣಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದರು.
ಶಸ್ತ್ರಚಿಕಿತ್ಸೆಯ ಬಳಿಕ ದೃಷ್ಟಿಯಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ವೃತ್ತಿಪರ ಹಾಗೂ ದೈನಂದಿನ ಚಟುವಟಿಕೆಗಳನ್ನು ಆತ್ಮವಿಶ್ವಾಸದಿಂದ ನಿರ್ವಹಿಸಲು ಸಾಧ್ಯವಾಗಿದೆ ಎಂದು ತುಳಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಡಾ. ಅದಿತಿ ಸಿಂಗ್ ಹಾಗೂ ಆಸ್ಪತ್ರೆಯ ತಂಡದ ಆರೈಕೆಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ತೀವ್ರ ಸಮೀಪದೃಷ್ಟಿ ಮತ್ತು ಇತರೆ ದೃಷ್ಟಿದೋಷ ವಿಧಾನಗಳಿಗೆ ಸೂಕ್ತವಲ್ಲದ ರೋಗಿಗಳಿಗೆ ಫೇಕಿಕ್ ICL ಉತ್ತಮ ಫಲಿತಾಂಶ ನೀಡಬಲ್ಲದು. ವಿವರವಾದ ತಪಾಸಣೆ ಬಳಿಕ ತುಳಸಿ ಅವರಿಗೆ ಈ ಶಸ್ತ್ರಚಿಕಿತ್ಸೆ ಸೂಕ್ತವೆಂದು ನಿರ್ಧರಿಸಲಾಯಿತು. ಅವರ ದೃಷ್ಟಿ ಮತ್ತು ಜೀವನದ ಗುಣಮಟ್ಟದಲ್ಲಿ ಆದ ಸುಧಾರಣೆ ಸಂತಸ ತಂದಿದೆ ಎಂದು ಡಾ. ಅದಿತಿ ಸಿಂಗ್ ತಿಳಿಸಿದ್ದಾರೆ. ಈ ಯಶಸ್ಸು ಮಂಗಳೂರಿನಲ್ಲಿಯೇ ವಿಶ್ವಮಟ್ಟದ ದೃಷ್ಟಿ ತಿದ್ದುಪಡಿ ಚಿಕಿತ್ಸೆ ಲಭ್ಯವಾಗುತ್ತಿರುವುದಕ್ಕೆ ನಿದರ್ಶನವಾಗಿದೆ.
