ಕೊಡವೂರು ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತ ಆರೋಗ್ಯ ಕಾರ್ಡ್ ವಿತರಣೆ

0
1

ಕೊಡವೂರು ವಾರ್ಡ್ ನಗರಸಭೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಫಲಾನುಭವಿಗಳಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಉದ್ಘಾಟಿಸಿ, ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕೊಡವೂರು, ತಮ್ಮ ಅವಧಿಯಲ್ಲಿ ಕೊಡವೂರು ವಾರ್ಡ್‌ನಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಕೊಡವೂರು ವಾರ್ಡ್‌ನ ಅಭಿವೃದ್ಧಿಗೆ ಶಾಸಕ ಯಶ್‌ಪಾಲ್ ಸುವರ್ಣ ಅವರು ಅನುದಾನ ಒದಗಿಸಿ ಸಹಕಾರ ನೀಡಿದ್ದಾರೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಗರಸಭೆ ಪೌರಾಯುಕ್ತ ಮಾಂತೇಶ್, ಕೊಡವೂರು ಕ್ರೆಡಿಟ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀ ನಾರಾಯಣ ಬಲ್ಲಾಳ್, ಮಾಜಿ ನಗರಸಭಾ ಸದಸ್ಯರಾದ **ಮೀನಾಕ್ಷಿ ಮಾಧವ, ಯುವರಾಜ್, ಯಶೋದಾ, ಹಾಗೂ *ನಾಗರಾಜ್ ಪಾಳೇಕಟ್ಟೆ ಉಪಸ್ಥಿತರಿದ್ದರು.

ರವಿ ಕರ್ಕೇರ ಸ್ವಾಗತಿಸಿ, ವಂದಿಸಿದರು.