ನ.22 ರಿಂದ 28: 14ನೇ ವರ್ಷದ ನುಡಿ ಹಬ್ಬ – ಯಕ್ಷಾಂಗಣ ಪ್ರಶಸ್ತಿ ಪ್ರದಾನ
ಮಂಗಳೂರು : ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲ್ಪಡುವ ಹದಿನಾಲ್ಕನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2026’ ಚತುರ್ದಶ ಸರಣಿಯು ಇದೇ 2026 ನವೆಂಬರ್ 22 ರಿಂದ 28ರ ವರೆಗೆ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗಲಿದೆ.

‘ಸಂಘಟನಾ ಪರ್ವ’ ಎಂಬ ಹೆಸರಿನಲ್ಲಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸರಣಿ ತಾಳಮದ್ದಳೆ: ನವೆಂಬರ 22 ರಂದು ಅಪರಾಹ್ನ ಗಂ.2.00ಕ್ಕೆ ಉದ್ಯಮಿ ಎ.ಕೆ.ಜಯರಾಮ ಶೇಖ ಅವರಿಂದ ನಾಂದಿ ದೀಪೋಜ್ವಲನ ಮೂಲಕ ತೋರಣ ನಾಂದಿಯಾಗಿ ‘ಬಂಗಾರ್ದ ಉರೆ’ ತುಳು ತಾಳಮದ್ದಳೆಯೊಂದಿಗೆ ಆರಂಭಗೊAಡು, ಅದೇ ದಿನ ಉದ್ಘಾಟನಾ ಸಮಾರಂಭದ ಬಳಿಕ ಸಂಜೆ ಗ .5.30ಕ್ಕೆ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಪ್ರತಿಷ್ಠಾನ (ರಿ.) ಉಪ್ಪಿನಂಗಡಿ ಇವರಿಂದ ‘ಚಂದ್ರ ವಂಶೋದಯ’ ಯಕ್ಷಗಾನ ತಾಳಮದ್ದಳೆ ಜರಗುವುದು.
ನ.23 ರಿಂದ 28ರ ವರೆಗೆ ಪ್ರತಿದಿನ ಸಾಯಂಕಾಲ ಗಂ.4.00ಕ್ಕೆ ಕ್ರಮವಾಗಿ ಹವ್ಯಾಸಿ ಬಳಗ ಕದ್ರಿ (ರಾಜಾ ಸೌದಾಸ), ಶ್ರೀ ವಾಣೀ ವಿಲಾಸ ಯಕ್ಷಗಾನ ಬಳಗ ಶಿರಂಕಲ್ಲು ಕಟೀಲು (ಭಾರ್ಗವ ರಾಮ), ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ವಿಷ್ಣು ಮಾಯೆ), ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಕೂಡ್ಲು, ಕಾಸರಗೋಡು (ಶಲ್ಯ ಸಾರಥ್ಯ), ಶ್ರೀ ಸುಬ್ರಹ್ಮಣ್ಯ ಯಕ್ಷ
ಬಳಗ ಸೂಡ (ದಾನಕೋಟಿ ದಾಮಾಜಿ – ತುಳು) ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು (ರಾಜಾ ಯಯಾತಿ) ಹೀಗೆ 7 ದಿನ ವಿವಿಧ ತಂಡಗಳ ಸಂಯೋಜನೆಯಲ್ಲಿ ವಿನೂತನ ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುತ್ತದೆ.
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ – ಗೌರವ ಪ್ರಶಸ್ತಿ: ಯಕ್ಷಾಂಗಣದ ಹದಿನಾಲ್ಕನೇ ವರ್ಷದ ತಾಳಮದ್ದಳೆ ಸಪ್ತಾಹ ಉದ್ಘಾಟನಾ ಸಮಾರಂಭವು ನವೆಂಬರ್ 22 ರಂದು ಭಾನುವಾರ ಸಾಯಂಕಾಲ ಗ . 4.30 ಕ್ಕೆ ಜರಗಲಿದ್ದು ಗೌರವಾಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಅಧ್ಯಕ್ಷತೆ ವಹಿಸುವರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಸಪ್ತಾಹವನ್ನು ಉದ್ಘಾಟಿಸುವರು. ಇದೇ ಸಂದರ್ಭ ಮುಂಬೈಯ ಪ್ರಸಿದ್ದ ಉದ್ಯಮಿ, ಕಲಾಪೋಷಕ ಮತ್ತು ಬಜ್ಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ ಥಾಣೆ ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲಾಗುವುದು. ಭಾರತೀಯ ಸೇನೆಯ ನಿವೃತ್ತ ಸೇನಾನಿ ಕ್ಯಾ.| ಶರತ್ ಭಂಡಾರಿ ಪ್ರಶಸ್ತಿ ಪ್ರದಾನ ಮಾಡುವರು.ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನವೆಂಬರ 28 ರಂದು ಶನಿವಾರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಹಮದ್ನಗರದ ಉದ್ಯಮಿ, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೆ. ಶೆಟ್ಟಿ ಅಹಮದ್ನಗರ ವಹಿಸುವರು. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ದೀಪ ಪ್ರಜ್ವಲನೆ ಮಾಡುವರು. ಮಂಗಳೂರು ನಗರಾಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಬಹುಶ್ರುತ ವಿದ್ವಾಂಸ ಮತ್ತು ಬಹುಭಾಷಾ ಪ್ರಸಂಗಕರ್ತ ಡಾ|ಡಿ.ಸದಾಶಿವ ಭಟ್ ಪಳ್ಳು (94) ಅವರಿಗೆ 2026ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡುವರು.
ಸಂಸ್ಮರಣೆ – ಸಮ್ಮಾನ: ಸಪ್ತಾಹದ ಎಲ್ಲಾ ದಿನಗಳಲ್ಲಿ ಯಕ್ಷಗಾನಕ್ಕಾಗಿ ದುಡಿದ ಹಿರಿಯ ಚೇತನಗಳು ಕೀರ್ತಿಶೇಷ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಪಳ್ಳಿ ರಮಾನಾಥ
ಹೆಗ್ಡೆ, ವಿದ್ವಾನ್ ಕೆ. ಕಾಂತ ರೈ ಮೂಡಬಿದಿರೆ, ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಫರಂಗಿಪೇಟೆ, ಕೆ.ಗೋವಿಂದ ಭಟ್
ಸೂರಿಕುಮೇರು ಹಾಗೂ ಶಂಭು ಶರ್ಮ ವಿಟ್ಲ – ಇವರ ಸಂಸ್ಮರಣೆ ನಡೆಯಲಿದೆ. ಅಲ್ಲದೆ ಹಿರಿಯ ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ಡಾ|ತಾರಾನಾಥ ವರ್ಕಾಡಿ ಅವರಿಗೆ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮೃತಿ ಗೌರವ ನೀಡಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಉಪಸ್ಥಿತರು :
- ಎಂ.ಸುAದರ ಶೆಟ್ಟಿ ಬೆಟ್ಟಂಪಾಡಿ (ಉಪಾಧ್ಯಕ್ಷರು)
- ರವೀಂದ್ರ ರೈ ಕಲ್ಲಿಮಾರು (ಪ್ರಧಾನ ಸಂಚಾಲಕ)
- ತೋನ್ಸೆಪುಷ್ಕಳ ಕುಮಾರ್ (ಪ್ರಧಾನ ಕಾರ್ಯದರ್ಶಿ)
- ಕೆ. ಲಕ್ಷಿö್ಮÃನಾರಾಯಣ ರೈ ಹರೇಕಳ (ಕಾರ್ಯದರ್ಶಿ)
- ಸುಮಾ ಪ್ರಸಾದ್ (ಕಾರ್ಯದರ್ಶಿ)

