ಸಂಘದ ವತಿಯಿಯಂದ ಸಂಘದ ಕಾರ್ಯವ್ಯಾಪ್ತಿಯ ಬಡರೋಗಿಗಳ ಅನುಕೂಲಕ್ಕಾಗಿ ಒಂದು ಸಿಂಗಲ್ functiom ಮೆಡಿಕಲ್ ಕಾಟ್ ಹಾಗೂ ಒಂದು ಅಂತಿಮ ಸಂಸ್ಕಾರಕ್ಕೆ ಉಪಯೋಗವಾಗುವ ಸ್ಟೀಲ್ ಟೇಬಲ್ ಅನ್ನು ಸಮಾಜ ಸೇವಕರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಹಾಗೂ ಕೆ.ಆರ್. ಪಾಟ್ಕರ್ ಅವರ ಸುಪರ್ದಿಗೆ ಶಿರ್ವದ ಸಂಘಮಿತ್ರ ಆವರಣದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ವೀರೇಂದ್ರ ಪಾಟ್ಕರ್, DCC ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ ಬಲ್ಲಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಹಾಗೂ ನಿರ್ದೇಶಕರಾದ ಹರಿಣಾಕ್ಷ ಶೆಟ್ಟಿ,ರಂಜಿತ್ ಪ್ರಭು ಹಾಗೂ ಪುರುಷೋತ್ತಮ ಶೆಟ್ಟಿಗಾರ್ ಅವರು ಉಪಸ್ತಿತರಿದ್ದರು.

