ಶ್ರೀ ವಡಭಾಂಡ ಬಲರಾಮ ದೇವಸ್ಥಾನಕ್ಕೆ ನಟಿ ಕಾವ್ಯಶ್ರೀ ಗೌಡ ಭೇಟಿ

0
22

ಉಡುಪಿ : ಬಿಗ್ ಬಾಸ್ ಖ್ಯಾತಿಯ ನಟಿ ಹಾಗೂ ಮಂಗಳಗೌರಿ ಧಾರಾವಾಹಿಯ ನಟಿ ಕಾವ್ಯಶ್ರೀ ಗೌಡ ಅವರು ಇಂದು ಶ್ರೀ ವಡಭಾಂಡ ಬಲರಾಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನಕ್ಕೆ ಆಗಮಿಸಿದ ನಟಿಯನ್ನು ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭ ಟಿ. ಶ್ರೀನಿವಾಸ ಭಟ್, ಶ್ರೀವರ ಭಟ್ ಕಡೆಕಾರ್, ಶ್ರೀ ಶಂಕರ ನಾರಾಯಣ ಏತಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.