ಮರಕಡಕರೆ ಪಿಲ್ಚಂಡಿ ದೈವಸ್ಥಾನದ ನೂತನ ಅನ್ನಛತ್ರ ನಿರ್ಮಾಣಕ್ಕೆ ಶಿಲಾನ್ಯಾಸ

0
16

ಮಿಜಾರು : ಪುರಾತನ ಮೂಲ ಮೈಸಂದಾಯ ವ್ಯಾಘ್ರ ಚಾಮುಂಡಿ, ಜುಮಾದಿ, ಬಂಟ, ಅಣ್ಣಪ್ಪ ಹಾಗೂ ಪಂಜುರ್ಲಿ ದೈವಸ್ಥಾನಕ್ಕೆ ಸಂಬಂಧಿಸಿದ ಮರಕಡಕರೆ ಪಿಲ್ಚಂಡಿ ದೈವಸ್ಥಾನದಲ್ಲಿ ನೂತನ ಅನ್ನಛತ್ರ (ಪಾಕಶಾಲೆ) ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಬಡಗಮಿಜಾರಿನ ವ್ಯಾಘ್ರ ಚಾಮುಂಡಿ ದೈವಸ್ಥಾನ ಮರಕಡಕರೆ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾದ ಕಾರ್ಯಕ್ರಮವು ವಿಘ್ನೇಶ್ ಪೆಜತ್ತಾಯ ಪೂಮಾವರಗುತ್ತು ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ರಂಜಿತ್ ಪೂಜಾರಿ ತೋಡಾರು, ಸತೀಶ್ಚಂದ್ರ ಸಾಲ್ಯಾನ್ ಇರುವೈಲ್ ಪಾಣಿಲ, ಗಜೇಂದ್ರ ಕುಮಾರ್, ಜಯ ಪೂಜಾರಿ ಕುದ್ಕೋಳಿ ಹಾಗೂ ಹರೀಶ್ ಬಂಗೇರ ಇರುವೈಲು ಭಾಗವಹಿಸಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ದೈವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ನೂತನ ಅನ್ನಛತ್ರ ನಿರ್ಮಾಣ ಕಾರ್ಯ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.