ಡಿ.12ರಂದು ಕಾಪುವಿನಲ್ಲಿ ರಕ್ತದಾನದ ಮಹಾಸೇವೆ; ಲೀಲಾಧರ ಶೆಟ್ಟಿ ದಂಪತಿಯ ಪುಣ್ಯಸ್ಮರಣೆ

0
15

ಬೃಹತ್ ರಕ್ತದಾನ ಶಿಬಿರ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 50 ಕುರ್ಚಿ ಹಸ್ತಾಂತರ ,ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕಾಪು :ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಹಾಗೂ ಸರ್ವ ಧರ್ಮದ ಬಂಧುಗಳ ಸಹಕಾರದೊಂದಿಗೆ ಸಮಾಜ ರತ್ನ ಕೆ. ದಿ / ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ದಿ/ ವಸುಂದರಾ ಶೆಟ್ಟಿ ಅವರ ತೃತೀಯ ವರ್ಷದ ಸಂಸ್ಮರಣೆಯೊಂದಿಗೆ ಡಿ. 12 ರಂದು ಮಜೂರು ಸರ್ಕಲ್ ಬಳಿಯ ಲೀಲಣ್ಣ ದಂಪತಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಕಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಲೀಲಣ್ಣ ಹೆಸರಿನಲ್ಲಿ ಪೂಜೆ ನಂತರ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ, ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ,ಕಾಪುವಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕುರ್ಚಿ ಹಸ್ತಾಂತರ , ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕಾಪುವಿನ ವೀರಭಧ್ರ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜ ರತ್ನ ಕೆ. ಲೀಲಾಧರ ಶೆಟ್ಟಿ ಅಭಿಮಾನಿ ಬಳಗ ಕಾಪು ಇವರ ಪ್ರಕಟಣೆಯು ತಿಳಿಸಿದೆ.