ಹೊಳ್ಳರಿಗೆ ಕಾಸರಗೋಡು ದಸರಾ-2026 ವಿಶೇಷ ಸನ್ಮಾನ

0
17

ಡಾl ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸಾರಥ್ಯದ ಕನ್ನಡ ಭವನ- ಗ್ರಂಥಾಲಯ ಕಾಸರಗೋಡು ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಸಂಯುಕ್ತವಾಗಿ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ”-2026 ಕಾರ್ಯಕ್ರಮ ಅಂಗವಾಗಿ ನಡೆದ “ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ -2026 ದೇವಸ್ಥಾನದ “ದುರ್ಗಾoಬಾ “ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ದಸರಾ ಕಾರ್ಯಕ್ರಮದ ನಿರ್ದೇಶಕ ಹಾಗೂ ಸಂಚಾಲಕರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ ಇವರಿಗೆ ” ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ” 2026 ಇದರ “ವಿಶೇಷ ಗೌರವಾರ್ಪಣೆ” ನೀಡಿ ಸನ್ಮಾನಿಸಲಾಯಿತು

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಬೆಂಗಳೂರಿನ ಬಿ. ಶ್ರೀನಿವಾಸ್ ಬಹದೂರ್ ವಹಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕವಿ, ಸಾಹಿತಿ, ವಿಮರ್ಶಕ ಡಾ. ಜಯಪ್ಪ ಹೊನ್ನಾಳಿ (ಜಯಕವಿ ಮೈಸೂರು ) ಮೈಸೂರು ರಾಜ ವಂಶದ ಜೆ. ಪಿ. ಅರಸ್, ಇರಾ ನೇಮು ಪೂಜಾರಿ, ಡಾ. ಸುರೇಶ್ ನೆಗಳಗುಳಿ, ಡಾ. ಕೊಳಚಪ್ಪೆ ಗೋವಿಂದ ಭಟ್. ಕಥಾಬಿಂದು ಪ್ರದೀಪ್ ಕುಮಾರ್, ಕವಯತ್ರಿ ಸೀತಾ ಲಕ್ಷ್ಮಿ ವರ್ಮ, ಗೊರೂರು ಪಂಕಜ, ರಾಜೇಶ್ ಕೋಟೆಕಣಿ, ಜಯಾನಂದ ಪೆರಾಜೆ, ಮುಂತಾದವರಿದ್ದರು. ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿ, ಗೊರೂರು ಪಂಕಜ, ನಿರ್ವಹಣೆ ನೆರವೇರಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.