ಮಣ್ಣಿನ ಪಾತ್ರೆ ನಿರ್ಮಾಣದ ಗುಡಿ ಕೈಗಾರಿಕೆಗೆ ಸರ್ಕಾರಿ ಜಾಗ ಒದಗಿಸಲು ಕುಲಾಲ ಸಂಘದಿಂದ ಮನವಿ

0
5

ಮಂಜೇಶ್ವರ: ಕುಲಾಲ ಸಮುದಾಯದ ಪಾರಂಪರಿಕ ಕುಲಕಸುಬಾದ ಮಣ್ಣಿನ ಪಾತ್ರೆ ನಿರ್ಮಾಣ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಗುಡಿ ಕೈಗಾರಿಕೆ ಸ್ಥಾಪಿಸಲು ಸರ್ಕಾರಿ ಸ್ಥಳ ಒದಗಿಸುವಂತೆ ಕುಲಾಲ ಸಂಘದ ಪುತ್ತಿಗೆ ಶಾಖೆಯ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂಬಂಧ ಕುಲಾಲ ಸಂಘದ ಪುತ್ತಿಗೆ ಶಾಖೆಯ ಅಧ್ಯಕ್ಷರಾದ ರಾಮಚಂದ್ರ ಕುಲಾಲ್ ಕುಲಾಲ್ ನಗರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಕುಲಾಲ್ ಅಮೆತ್ತೊಡು ಮತ್ತು ಪ್ರವೀಶ್ ಕುಲಾಲ್ ಬೀರಿಕುಂಜ ಅವರು ಮಂಜೇಶ್ವರ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಮಣ್ಣಿನ ಪಾತ್ರೆ ನಿರ್ಮಾಣದ ಪಾರಂಪರಿಕ ಕಸುಬನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಗುಡಿ ಕೈಗಾರಿಕೆಯ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ವಿವರಿಸಿ, ಸರ್ಕಾರಿ ಜಾಗ ಮಂಜೂರು ಮಾಡುವಂತೆ ಅರ್ಜಿ ಹಾಗೂ ವಿನಂತಿ ಪತ್ರವನ್ನು ಸಲ್ಲಿಸಿ ಮನವಿ ಮಾಡಿದರು.