ಬೊಲ್ಯೊಟ್ಟು ಆಲಡೆ ಬ್ರಹ್ಮಕಲಶೋತ್ಸವ ಸಿದ್ಧತೆಗೆ ಮುಂಬೈ ಸಮಿತಿ ಸಜ್ಜು

0
4

ಮುಂಬೈ : ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಬೊಲ್ಯೊಟ್ಟು ಆಲಡೆಯ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಸಿದ್ಧತೆಗಳ ಹಿನ್ನೆಲೆಯಲ್ಲಿ ಮುಂಬೈ ಸಮಿತಿಯ ನೇತೃತ್ವದಲ್ಲಿ ವಿಶೇಷ ಸಭೆಯನ್ನು ನವೆಂಬರ್ 28ರಂದು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಅಂಧೇರಿ ಪಶ್ಚಿಮದ ಆಜಾದ್ ನಗರ ಮೆಟ್ರೋ ರೈಲ್ವೆ ನಿಲ್ದಾಣದ ಸಮೀಪ, ದಾದಾಭಾಯಿ ರಸ್ತೆಯ ಭವನ್ಸ್ ಕಾಲೇಜು ಬಳಿಯ ‘ದಿ ಅಂಧೇರಿ ರಿಕ್ರಿಯೇಷನ್ ಕ್ಲಬ್’ನಲ್ಲಿ ಸಭೆ ನಡೆಯಲಿದೆ.

ಮಾಜಿ ಸಂಸದ ಗೋಪಾಲ ಸಿ. ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ವಿವಿಧ ಸಮಾಜಗಳ ಸಂಘಟನೆಗಳ ಪ್ರಮುಖರು ಹಾಗೂ ಗಣ್ಯರು ಭಾಗವಹಿಸಲಿದ್ದು, ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಮತ್ತು ಮುಂಬೈ ಸಮಿತಿಯ ಸಹಕಾರದ ಕುರಿತು ಚರ್ಚೆ ನಡೆಯಲಿದೆ.

ಬೊಲ್ಯೊಟ್ಟು ಆಲಡೆಯ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಸುಂಧರ್ ಎಸ್. ಶೆಟ್ಟಿ ವಿನಂತಿಸಿದ್ದಾರೆ.

ಮುಂಬೈ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ ಅವರೂ ಸಭೆಯಲ್ಲಿ ಸಮಾಜದ ಪ್ರಮುಖರು ಹಾಗೂ ಭಕ್ತಾದಿಗಳು ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: 9930632998, 9819122292.