ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ ವಲಯ ವತಿಯಿಂದ ಡಿಸೆಂಬರ್ 6 ರಂದು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮ ದಿನಾಚರಣೆ

0
11

ಕಲ್ಲಡ್ಕ :. ಬಂಟ್ವಾಳ ತಾಲೂಕಿನ ಗೋಳ್ತಮಜಲು, ಬಾಳ್ತಿಲ, ಅಮ್ಟೂರು, ವೀರಕಂಭ, ಬೋಳಂತೂರು, ಬೊಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ.)ಕಲ್ಲಡ್ಕ ವತಿಯಿಂದ 6-12-2026 ನೇ ಆದಿತ್ಯವಾರ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮ ದಿನಾಚರಣೆ ಕಲ್ಲಡ್ಕ ಕಾವೇರಿ ಸಂಕೀರ್ಣದ ಆನಂದ ಮಂಟಪ ಸಭಾಭವನದಲ್ಲಿ ಗುರುಪೂಜೆ,ಭಜನಾ ಸಂಕೀರ್ತನೆ ಹಾಗೂ ಧಾರ್ಮಿಕ ಸಭೆ ಜರಗಲಿರುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ ವಲಯ ಅಧ್ಯಕ್ಷ ಜಯಪ್ರಕಾಶ್ ಪೂಜಾರಿ ತೆಕ್ಕಿಪಾಪು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ
ಭುವನೇಶ್ ಪಚ್ಚಿನಡ್ಡ ಅಧ್ಯಕ್ಷರು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.), ಸದಾನಂದ ಪೂಜಾರಿ ಸ್ಥಾಪಕಾಧ್ಯಕ್ಷರು ನಂದಾದೀಪ ಪೌಂಡೇಶನ್ (ರಿ.) ಮಂಗಳೂರು, ಮನೋಜ್ ಕುಮಾರ್ ಕಟ್ಟೆಮಾರ್ ಧರ್ಮದರ್ಶಿಗಳು ಮಂತ್ರದೇವತಾ ಸಾನಿಧ್ಯ ಅಮ್ಟೂರು, ಸದಾಶಿವ ಸನಿಲ್ ಬೊಂಡಾಲ, ಶರತ್ ಪೂಜಾರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಟ್ರಸ್ಟ್ ನೀರಪಾದೆ,ಸುರೇಂದ್ರ ಅಮೀನ್ ಬೋಳಂತೂರು, ಸಂದೀಪ್ ಪೂಜಾರಿ ಕೆಲಿಂಜ,ಶ್ರೀ ಜನಾರ್ಧನ ಪೂಜಾರಿ ನಾರುಕೋಡಿ,
ಶಿವಾನಂದ ಏಳ್ತಿಮಾರ್, ಲಾವಣ್ಯ ಅಂಚನ್, ಅಧ್ಯಕ್ಷರು ಬಿಲ್ಲವ ಮಹಿಳಾ ಘಟಕ ಕಲ್ಲಡ್ಕ, ಗೀತಾಂಜಲಿ ಸುವರ್ಣ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಸಮಾಜ ಸೇವಕರು ಉಡುಪಿ, ಕುಮಾರಿ ಭವ್ಯಶ್ರೀ ಪೂಜಾರಿ, ಚಲನಚಿತ್ರ ನಟಿ, ಮೊದಲಾದವರು ಭಾಗವಹಿಸಲಿರುವರು.

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸುತ್ತಾರೆ.