ಡಿ.12ರಂದು ಸಿದ್ದಾಪುರ ಸರಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವ ‘ಚಿಣ್ಣರ ಚಿಲಿಪಿಲಿ-2026’

0
5

ಸಿದ್ದಾಪುರ : ಕುಂದಾಪುರ ತಾಲೂಕಿನ ಸಿದ್ದಾಪುರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 12ರಂದು ಶಾಲಾ ವಾರ್ಷಿಕೋತ್ಸವ ‘ಚಿಣ್ಣರ ಚಿಲಿಪಿಲಿ-2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಿಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಗುರುತಿಸುವುದು, ಅತಿಥಿಗಳ ಭಾಷಣ ಹಾಗೂ ಅಧ್ಯಕ್ಷರ ಭಾಷಣ ನಡೆಯಲಿದೆ.

ಸಂಜೆ 5 ಗಂಟೆಯಿಂದ ಶಾಲಾ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ವಾಗತ ಭಾಷಣ, ವಾರ್ಷಿಕ ವರದಿ ವಾಚನ, ದಾನಿಗಳ ಗುರುತಿಸುವಿಕೆ ಹಾಗೂ ಅತಿಥಿಗಳ ಭಾಷಣ ನಡೆಯಲಿದೆ.

ಇದೇ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಡಾ. ಸುಧೀರ್ ಪೈ ಅವರು ಸ್ವಸ್ತಿವಾಚನ ನೆರವೇರಿಸಲಿದ್ದು, ಸನ್ಮಾನಿತರಿಂದ ಅನಿಸಿಕೆ ಹಾಗೂ ಅಧ್ಯಕ್ಷರ ಭಾಷಣದ ಬಳಿಕ ಧನ್ಯವಾದ ಸಮರ್ಪಣೆ ನಡೆಯಲಿದೆ.

ರಾತ್ರಿ 9 ಗಂಟೆಯಿಂದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ‘ಪಂಜರ ಶಾಲೆ’ ನಾಟಕ, ‘ಮಾಯಾಜಾಲ’ ಕಿರು ನಾಟಕ ಹಾಗೂ ‘ಶ್ರೀರಾಮ ದರ್ಶನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಶಾಲೆಯ ವಾರ್ಷಿಕೋತ್ಸವದ ಯಶಸ್ಸಿಗೆ ಧನಸಹಾಯ ನೀಡಲು ಇಚ್ಛಿಸುವ ದಾನಿಗಳು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿರುವ ಬ್ಯಾಂಕ್ ಖಾತೆ ಅಥವಾ ಪಾವತಿ ವಿವರಗಳ ಮೂಲಕ ಸಹಕರಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ವಿನಂತಿಸಿದ್ದಾರೆ.