ಉಡುಪಿ : ಉಡುಪಿ ಶ್ರೀಕೃಷ್ಣ ಮಠದ ಕನಕನ ಕಿಂಡಿಯ ಎದುರು ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ ತಮಿಳುನಾಡು ಮೂಲದ ಮಹಿಳೆಯೊಬ್ಬರನ್ನು ಸಖಿ ಸೆಂಟರ್ಗೆ ದಾಖಲಿಸಲಾಗಿದೆ.

ಮಹಿಳೆಯು ಪ್ರತಿದಿನ ರಥಬೀದಿಯಲ್ಲಿ ಗಲಾಟೆ ಮಾಡುತ್ತಿದ್ದುದನ್ನು ಗಮನಿಸಿದ ಅಕ್ಕಪಡೆ ಹಾಗೂ ಮಹಿಳಾ ಪೋಲಿಸ್ ಠಾಣೆಯ ಸಿಬ್ಬಂದಿ, ಆಕೆಯ ನೆರವಿಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮಹಿಳೆಯನ್ನು ಸಖಿ ಸೆಂಟರ್ಗೆ ದಾಖಲಿಸಲು ಅಗತ್ಯ ಸಹಕಾರ ನೀಡಿದ್ದಾರೆ.

