ಪೂಜ್ಯರ ಜನ್ಮದಿನದ ಸಂಭ್ರಮ, ಸೇವಾ ದಿನ ಆಚರಣೆ

0
6

ಶಿವ ಸದನ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯ ಇಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮ ವಿಭೂಷಣ, ರಾಜಶ್ರೀ,ಡಾ.ಡಿ. ವೀರೇಂದ್ರ ಹೆಗ್ಗಡೆಯವರ 79ನೆಯ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸಿದರು.

ಧರ್ಮಸ್ಥಳ ಯೋಜನೆಯ ನಿಕಟಪೂರ್ವ ಜಿಲ್ಲಾ ನಿರ್ದೇಶಕ ಪದ್ಮನಾಭ ಶೆಟ್ಟಿ, ತಾಲೂಕು ಜನಜಾಗೃತಿಯ ಅಧ್ಯಕ್ಷ ಸತೀಶ್ ನಾಯಕ್, ವಲಯ ಜನಜಾಗೃತಿ ಅಧ್ಯಕ್ಷ ಪ್ರಶಾಂತ್ ಮುರಾ, ಕೃಷಿ ಮೇಲ್ವಿಚಾರಕ ಹರೀಶ್, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಲತಾ ಕೆ, ತಾಲೂಕು ಯೋಜನಾಧಿಕಾರಿ ಶಶಿಧರ್, ಕನ್ನಡ ಮತ್ತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಉಮೇಶ್ ನಾಯಕ್, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುತ್ತೂರು ತಾಲೂಕು ಬಾಲಕೃಷ್ಣ ಆಳ್ವ ,ಸೇವಾ ಪ್ರತಿನಿಧಿಗಳು,ಶಿವಸದನದ ಎಲ್ಲಾ ಸದಸ್ಯರು, ಶಿವ ಸದನ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಕರುಣ್ ಬೆಳ್ಳೆ ಯವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರಗಿತು.

ಪೂಜ್ಯರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಾಯಿತು.

ವರದಿ ರಾಯಿ ರಾಜ ಕುಮಾರ್

.