ಶಿವಮೊಗ್ಗ: ಕನ್ನಡ ಭಾಷೆ, ನಾಡು-ನುಡಿಯ ಅಭಿಮಾನವನ್ನು ಸಾರುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಗೀತ ಗಾಯನ ಕಾರ್ಯಕ್ರಮವನ್ನು ನವೆಂಬರ್ 28ರಂದು ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ.
ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ (ರಿ.), ಶಾಂತಿ ಸಾಗರ ಕಲಾ ಸಂಘ (ರಿ.) ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.), ಜಿಲ್ಲಾ ಘಟಕ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ‘ಕನ್ನಡವೇ ತಾಯ್ತುಡಿಯು, ಕರುನಾಡು ತಾಯ್ನಾಡು’ ಎಂಬ ಘೋಷವಾಕ್ಯದೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕೆ.ಇ. ಕಾಂತೇಶ್, ಎನ್. ಗೋಪಿನಾಥ್, ಡಾ. ಅರವಿಂದ್ ಎಸ್.ಟಿ. ಹಾಗೂ ಎಸ್.ವಿ. ಚಂದ್ರಕಲಾ ಭಾಗವಹಿಸಲಿದ್ದಾರೆ.
ನವೆಂಬರ್ 28ರಂದು ಸಂಜೆ 4.30ಕ್ಕೆ ಶಿವಮೊಗ್ಗದ ಮಥುರಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡಾಭಿಮಾನಿಗಳು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

