ತುಳುನಾಡ ಕಲಾವಿದರು (ರಿ.), ಪಡುಬಿದ್ರಿ ಇದರ ನೂತನ ಅಧ್ಯಕ್ಷರಾಗಿ ಸುಕುಮಾರ್ ಬಂಗೇರ ಆಯ್ಕೆ

0
5

ಪಡುಬಿದ್ರಿ: ತುಳುನಾಡ ಕಲಾವಿದರು (ರಿ.), ಪಡುಬಿದ್ರಿ ಇದರ 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಕುಮಾರ್ ಬಂಗೇರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ನೂತನ ಪದಾಧಿಕಾರಿಗಳಾಗಿ: ಗೌರವಾಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಉಪಾಧ್ಯಕ್ಷರಾಗಿ ಕು.ಯಶೋಧ ಪಡುಬಿದ್ರಿ ಹಾಗೂ ರಚನ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ್ ಕೆ., ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಪಡುಬಿದ್ರಿ, ಕೋಶಾಧಿಕಾರಿಯಾಗಿ ಕು. ಸಹನಾ ಆಚಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾ ವರುಣ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೀನ್ ಪಡುಬಿದ್ರಿ, ಸಂತೋಷ್ ಪಡುಬಿದ್ರಿ, ಸುರೇಶ್ ಪಡುಬಿದ್ರಿ, ಗೀತಾ ಅರುಣ್, ಹೇಮಲತಾ ಸುವರ್ಣ, ವನಿತಾ ದಿನೇಶ್, ಅಮಿತಾ ಸಚಿನ್ ಪುತ್ರನ್, ಪೂಜಾ ವರುಣ್ ಪಡುಹಿತ್ಲು, ಸಂತೋಷ್ ನಂಬಿಯಾರ್ ಪಡುಬಿದ್ರಿ, ಆದಿತ್ಯ ಕೆ.ಆರ್., ಅವಿತಾ ಕೆ.ಟಿ., ರವಿ ಪಡುಬಿದ್ರಿ ಹಾಗೂ ಅಶ್ವಥ್ ಆಚಾರ್ಯ ಪಾದೆಬೆಟ್ಟು ಅವರು ಆಯ್ಕೆಯಾಗಿದ್ದಾರೆ.