ಪಕ೯ಳ: ಕವನ ರಚನಾ ಕಮ್ಮಟ

0
12

ಮಣಿಪಾಲ ಮಂಗಳ ಕಲಾ ಸಾಹಿತ್ಯ ವೇದಿಕೆ(ರಿ) ಪಕ೯ಳ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಸಹಯೋಗದೊಂದಿಗೆ ಶೆಟ್ಟಿಬೆಟ್ಟು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಸಭಾಂಗಣದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಕವನ ರಚನಾ ಕಮ್ಮಟ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾದ೯ನ್ ಕೊಡವೂರು, ವಿದ್ಯಾರ್ಥಿಗಳು ಪಾಠದೊಂದಿಗೆ ಈ ರೀತಿಯ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಜ್ಞಾನ ಸಂಪಾದನೆ ಜೊತೆಗೆ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ.

ಈ ಕಮ್ಮಟದಲ್ಲಿ ಸಿಗುವ ಮಾಹಿತಿಯನ್ನು ಪಡೆದುಕೊಂಡು ಉತ್ತಮ ಕವಿಗಳಾಗಿ ಮೂಡಿಬನ್ನಿ ಎಂದು ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ನಾಯಕ್, ಓದುವ ಹವ್ಯಾಸ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ ಮೊಬೈಲ್ ಕಡಿಮೆ ಮಾಡಿ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಡಿಸಬೇಕು ಎಂದರು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ವೇದಿಕೆ ಗೌರವಾಧ್ಯಕ್ಷ ಕೆ ಪ್ರಕಾಶ್ ಶೆಣೈ, ಸಾಹಿತ್ಯವು ಮನಸ್ಸನ್ನು ಮತ್ತಷ್ಟು ರಚನಾತ್ಮಕವಾಗಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡುತ್ತದೆ ಈ ರೀತಿಯ ಕಾರ್ಯಕ್ರಮ ಅತ್ಯಂತ ಅಗತ್ಯವಿದೆ ಎಂದರು.

ಉದಯವಾಣಿ ಪತ್ರಿಕೆಯ ವಿಶ್ರಾಂತ ಉಪಸಂಪಾದಕ ನಿತ್ಯಾನಂದ ಪಡ್ರೆ, ಕವನ ರಚನಾ ಕಮ್ಮಟ ದಲ್ಲಿ ಅನೇಕ ಕವಿಗಳ ಕವನಗಳನ್ನು ಓದಿ ಉದಾಹರಣೆ ನೀಡಿ ಕವನ ಬರೆಯುವ ರೀತಿಯನ್ನು ಸಮಗ್ರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಅವರನ್ನು ವೇದಿಕೆಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳಕಲಾ ಸಾಹಿತಿ ವೇದಿಕೆ ಅಧ್ಯಕ್ಷ ಗಣೇಶ್ ಕುಲಾಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸದಸ್ಯರಾದ ಗಣೇಶ್ ಸಣ್ಣಕ್ಕಿ ಬೆಟ್ಟು, ಗೋಪಿ ಹಿರೇಬೆಟ್ಟು, ಸುದೀರ್ ಕುಮಾರ್ ನಗರಬೆಟ್ಟು, ಸುಧಾಕರ್ ನಾಯಕ್ ಕಬ್ಯಾಡಿ, ಕೃಷ್ಣ ನಾಯಕ್ ಸಣ್ಣಕ್ಕಿ ಬೆಟ್ಟು, ರಾಜೇಶ್ ನಾಯಕ್ ಸಣ್ಣಕ್ಕಿ ಬೆಟ್ಟು, ಗುರುಪ್ರಸಾದ್ ಕಬ್ಯಾಡಿ, ಪ್ರಸಾದ್ ನಾಯಕ್ ಸಣ್ಣಕ್ಕಿ ಬೆಟ್ಟು,ಗಜೇಂದ್ರ ಆಚಾರ್ಯ ಬಾಲ್ಕಟ್ಟ, ಅಶೋಕ್ ಸಣ್ಣಕ್ಕಿ ಬೆಟ್ಟು,ಮೌನೇಶ ಆಚಾರ್ಯ ಪರ್ಕಳ ಉಪಸ್ಥಿತರಿದ್ದರು.

ಅಶೋಕ್ ಸಣ್ಣಕ್ಕಿ ಬಿಟ್ಟು ಸ್ವಾಗತಿಸಿ, ಮನೆಯೇ ಗ್ರಂಥಾಲಯ ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಯಿತು.