ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ನೂತನ “ಶ್ರೀ ಗಿಲ್ಕಿಂಜತ್ತಾಯ ಮಹಾದ್ವಾರ” ಲೋಕಾರ್ಪಣ ಕಾರ್ಯಕ್ರಮ

0
108

ಬಂಟ್ವಾಳ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಏಪ್ರಿಲ್ 7 ಮತ್ತು 8 ರಂದು ಜರಗಲಿರುವುದು. ದಿನಾಂಕ 7-4-2025 ನೇ ಸೋಮವಾರ ಸಂಜೆ 7 ಗಂಟೆಗೆ ಶ್ರೀ ಗಿಲ್ಕಿಂಜತ್ತಾಯ ಉತ್ಸವ ಸಮಿತಿ ವತಿಯಿಂದ ನಿರ್ಮಿಸಲ್ಪಟ್ಟ ” ಶ್ರೀ ಗಿಲ್ಕಿಂಜತ್ತಾಯ ಮಹಾದ್ವಾರದ ಲೋಕಾರ್ಪಣ “ಕಾರ್ಯಕ್ರಮ ಜರಗಲಿರುವುದು. ನಂತರ ದೈವದ ಬಂಡಾರವೇರಿ ಕಂಬಳ ವಲಸರಿ ಜರಗಲಿರುವುದು.
ರಾತ್ರಿ ಗಂಟೆ 8 ರಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ ಕಾರ್ಯಕ್ರಮ ಬಳಿಕ ಶ್ರೀ ಲಲಿತೆ ಕಲಾವಿದರು(ರಿ.) ಮಂಗಳೂರು ಇವರಿಂದ “ಶನಿ ಮಹಾತ್ಮೆ” ಎನ್ನುವ ತುಳು ಪೌರಾಣಿಕ ನಾಟಕ ನ ಜರಗಲಿರುವುದು. ದಿನಾಂಕ 8-4-2025 ನೇ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಗಿಲ್ಕಿಂಜತ್ತಾಯ ದೈವದ ನೇಮೋತ್ಸವ ಜರಗಲಿರುವುದು. ಮಧ್ಯಾಹ್ನ ಯುವಶಕ್ತಿ ಫ್ರೆಂಡ್ಸ್ ವೀರಕಂಬ ವತಿಯಿಂದ ಸಾರ್ವಜನಿಕ ಅನ್ನದಾನ ಸೇವೆ ನಡೆಲಿದ್ದು, ಸಂಜೆ 6 ಗಂಟೆಗೆ ಕಲ್ಲುರ್ಟಿ, ಕಲ್ಕೂಡ, ಕೊರತಿ, ಕೊರಗಜ್ಜ ದೈವದ ಕೋಲೋತ್ಸವ, ಬಳಿಕ ದೈವದ ಕುಕ್ಕಿಕಟ್ಟೆ ಒಳಸರಿ ಜರಗಳಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here