ಬಂಟ್ವಾಳ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಏಪ್ರಿಲ್ 7 ಮತ್ತು 8 ರಂದು ಜರಗಲಿರುವುದು. ದಿನಾಂಕ 7-4-2025 ನೇ ಸೋಮವಾರ ಸಂಜೆ 7 ಗಂಟೆಗೆ ಶ್ರೀ ಗಿಲ್ಕಿಂಜತ್ತಾಯ ಉತ್ಸವ ಸಮಿತಿ ವತಿಯಿಂದ ನಿರ್ಮಿಸಲ್ಪಟ್ಟ ” ಶ್ರೀ ಗಿಲ್ಕಿಂಜತ್ತಾಯ ಮಹಾದ್ವಾರದ ಲೋಕಾರ್ಪಣ “ಕಾರ್ಯಕ್ರಮ ಜರಗಲಿರುವುದು. ನಂತರ ದೈವದ ಬಂಡಾರವೇರಿ ಕಂಬಳ ವಲಸರಿ ಜರಗಲಿರುವುದು.
ರಾತ್ರಿ ಗಂಟೆ 8 ರಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭರತನಾಟ್ಯ ಕಾರ್ಯಕ್ರಮ ಬಳಿಕ ಶ್ರೀ ಲಲಿತೆ ಕಲಾವಿದರು(ರಿ.) ಮಂಗಳೂರು ಇವರಿಂದ “ಶನಿ ಮಹಾತ್ಮೆ” ಎನ್ನುವ ತುಳು ಪೌರಾಣಿಕ ನಾಟಕ ನ ಜರಗಲಿರುವುದು. ದಿನಾಂಕ 8-4-2025 ನೇ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಗಿಲ್ಕಿಂಜತ್ತಾಯ ದೈವದ ನೇಮೋತ್ಸವ ಜರಗಲಿರುವುದು. ಮಧ್ಯಾಹ್ನ ಯುವಶಕ್ತಿ ಫ್ರೆಂಡ್ಸ್ ವೀರಕಂಬ ವತಿಯಿಂದ ಸಾರ್ವಜನಿಕ ಅನ್ನದಾನ ಸೇವೆ ನಡೆಲಿದ್ದು, ಸಂಜೆ 6 ಗಂಟೆಗೆ ಕಲ್ಲುರ್ಟಿ, ಕಲ್ಕೂಡ, ಕೊರತಿ, ಕೊರಗಜ್ಜ ದೈವದ ಕೋಲೋತ್ಸವ, ಬಳಿಕ ದೈವದ ಕುಕ್ಕಿಕಟ್ಟೆ ಒಳಸರಿ ಜರಗಳಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ನೂತನ “ಶ್ರೀ ಗಿಲ್ಕಿಂಜತ್ತಾಯ ಮಹಾದ್ವಾರ” ಲೋಕಾರ್ಪಣ ಕಾರ್ಯಕ್ರಮ
RELATED ARTICLES