ಸರಕಾರದ ಹಣ ಪೋಲು ಮಾಡುತ್ತಿದೆಯಾ ಲೋಕೋಪಯೋಗಿ ಇಲಾಖೆ – ಸಿರಾಜ್ ಬಜ್ಪೆ

0
214

ಬಜಪೆ:ಮಳವೂರು ಸೇತುವೆ ಕೆಳಗೆ ಖಾಸಗಿ ಜಮೀನಿಗೆ ಲೋಕೋಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಿಸುವ ಉದ್ದೇಶದಿಂದ,ನದಿಗೆ ಮಣ್ಣು ತುಂಬಿಸುವ ಕೆಲಸ ಬರದಿಂದ ಸಾಗುತ್ತಿದೆ.ಬಜ್ಪೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಬಳಿಕ ಜನಸಾಮಾನ್ಯರ ಮೂಲಭೂತ ಕೆಲಸ ಮಾಡಲು ಅನುದಾನವಿಲ್ಲದೆ ಒದ್ದಾಡುತ್ತಿರುವಾಗ, ಸುಮಾರು 4 ಕೋಟಿಯಷ್ಟು ಹಣವನ್ನು ವಿನಿಯೋಗಿಸುತ್ತಿರುವ ಲೋಕೋಪಯೋಗಿ ಇಲಾಖೆ ,ಸರಕಾರದ ಖಜಾನೆಗೆ ಕಣ್ಣ ಹಾಕುತ್ತಿರುವುದು ಈ ಭಾಗದ ಜನಪ್ರತಿನಿಧಿಗಳಿಗೆ ಕಾಣದೆ ಇರುವುದು ವಿಪರ್ಯಾಸ ಎಂದು ಬಜ್ಪೆ ನಾಗರೀಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ನದಿಗೆ ಮಣ್ಣು ತುಂಬಿಸುವುದರಿಂದ ಮಳೆಗಾಲದಲ್ಲಿ ಬರದಿಂದ ಹರಿಯುವ ನೀರು ಸರಾಗವಾಗಿ ಹರಿಯಲು ತಡೆಯಾಗಿ ಸಮೀಪದ ಜಾಮೀನು ಮತ್ತು ಮನೆಗಳಿಗೆ ಹಾನಿಯಾಗುವುದಕ್ಕೆ ಕಾರಣವಾಗಬಹುದು .ರಿಯಲ್ ಎಸ್ಟೇಟ್ ಮಾಫಿಯಾದವರನ್ನು ತೃಪ್ತಿಪಡಿಸಲು ಹೊರಟ ಇಲಾಖೆ,ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜನರ ಕಣ್ಣಿಗೆ ಕಾಣುದಿಲ್ಲ ಅನ್ನುವ ಭ್ರಮೆ ಬಿಟ್ಟು ಬಿಡಿ.ಈ ಕೂಡಲೇ ಕೆಲಸ ನಿಲ್ಲಿಸಿ ನದಿಗೆ ಹಾಕಿದ ಮಣ್ಣು ತೆಗೆಯಬೇಕು ,ಇಲ್ಲದಿದ್ದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ದೊಡ್ಡ ಮಟ್ಟದ ಹೋರಾಟ ಮಾಡುವ ಮೂಲಕ ನದಿಗೆ ಹಾಕಿದ ಮಣ್ಣು ತೆಗೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಮೌಖಿಕವಾಗಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here