ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ದೇಶದ 26 ಕ್ಕೂ ಅಧಿಕ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಕಾಟಿಪಳ್ಳ ವಾರ್ಡ್ ನ ಬಿಜೆಪಿ ನೇತೃತ್ವದಲ್ಲಿ ಗಣೇಶಪುರ ಕಾಟಿಪಳ್ಳ ಸರ್ಕಲ್ ನಲ್ಲಿ ಮೌನ ಪ್ರಾರ್ಥನೆ ನೆರವೇರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು ಮನಪಾ ನಿಕಟಪೂರ್ವ ಸದಸ್ಯರಾದ ಲೋಕೇಶ್ ಬೊಳ್ಳಾಜೆ,ಸರಿತಾ ಶಶಿಧರ, ಲಕ್ಷ್ಮೀ ಶೇಖರ ದೇವಾಡಿಗ,ಶಶಿಧರ ಶೆಟ್ಟಿ ಸೂರಿಂಜೆ, ಶಾಂತ ಕುಮಾರ್,ಬಾಲಕೃಷ್ಣ ಸುವರ್ಣ,ಹೊನ್ನಯ್ಯ ಕೋಟ್ಯಾನ್,ಭರತ್ ರಾಜ್ ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು.