ಬಂಟ್ವಾಳ: ಇಲ್ಲಿನ ಮಂಚಿ -ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಏ.27ರಿಂದ 28ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಕುಡೆ ಶ್ರೀನಿವಾಸ್ ಆಚಾರ್ ಮತ್ತು ಕೆಮ್ಮಿಂಜೆ ನಾಗೇಶ ತಂತ್ರಿ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ಹಾಗೂ ಎಡನೀರು ಸಚ್ಚಿದಾನಂದ ಭಾರತೀ ಮಹಾಸ್ವಾಮಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ದೇವರಿಗೆ ದುರ್ಗಾ ನಮಸ್ಕಾರ, ರಂಗಪೂಜೆ, ಬಜನೆ, ದೇವರ ಬಲಿ ಉತ್ಸವ, ಶಾಸ್ತಾರ ದೇವರಿಗೆ ಶತ ರುದ್ರಾಭಿಷೇಕ, ಸುಡುಮದ್ದು ಪ್ರದರ್ಶನ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.