ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮಹಾತೊಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ದೇವಿ ಅಮ್ಮನವರ ಹಿಂದಿನ ಗುಡಿಯ ಕಳಶದಲ್ಲಿ ಶಾಸನ ಪತ್ತೆಯಾಗಿದೆ.
ಶಾಸನ ಒಂದು ಸಾಲಿನದ್ದಾಗಿದ್ದು ,ಶಾಸನದಲ್ಲಿ ಸೇವೆ ನೀಡಿದವರು ಹಾಗೂ ಕಾಲಮಾನ ಉಲ್ಲೇಖಿಸಲಾಗಿದೆ.
ಶಾಸನದ ಪಠ್ಯದಂತೆ
೧. ಬಾ ದೇವಿ ಅಂಮನವರ ಸ್ಥಳಕ್ಕೆ ಕಂಚಗಾರ ಪರಮೇಶ್ವರ ಸ ಸೇವೆ ತಾ. ೧. * ೧೮೯೯
ಅಥ೯ : ದೇವಿ ಅಮ್ಮನವರ ಸನ್ನಿಧಿಗೆ ಕಂಚುಗಾರ ಪರಮೇಶ್ವರ ರು ಸೇವೆನೀಡಿರುವುದಾಗಿದೆ. ಇದರ ಕಾಲಮಾನ ಕ್ರಿಶ ತಾರೀಕು ದಿನ 1 ತಿಂಗಳು ಅಸ್ಷಷ್ಠವಾಗಿರುತ್ತದೆ ಇಸವಿ 1899 ಅಂದರೆ 126 ವಷ೯ದ್ದಾಗಿದೆ.
ಈ ಚಿಕ್ಕ ಶಾಸನವನ್ನು ಪ್ರದೀಪ ಕುಮಾರ ಬಸ್ರೂರು ಪತ್ತೆ ಹಚ್ಚಿದ್ದು, ಇವರಿಗೆ ಇವರಿಗೆ ಅಭಿಷೇಕ್ ಮೊಗವೀರ ಬಾಳೆಹಿತ್ಲು, ಹಾಗೂ ದೇವಸ್ಥಾನದ ಸಿಬ್ಬಂದಿ ಸುಮಂತ ಸಹಕಾರ ನೀಡಿರುತ್ತಾರೆ.
ಅಧ್ಯಯನಕ್ಕೆ ಮಾಗ೯ದಶ೯ಕರಾಗಿರುವ ಸಂಶೋಧಕರು ಅಜಯ ಕುಮಾರ್ ಶಮಾ೯ ಹಾಗೂ ಶ್ರೀ ಬಿ.ಅಪ್ಪಣ್ಣ ಹೆಗ್ಡೆ ಆಡಳಿತ ಧಮ೯ದಶಿ೯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಹಾಗೂ ಶ್ರೀ ಬಿ.ಕಿಶನ್ ಹೆಗ್ಡೆ ಜೀಣೋ೯ದ್ಧಾರ ಸಮಿತಿ ಸದಸ್ಯರು ಅಧ್ಯಯನ ಕ್ಕೆ ಸಹಕಾರ ನೀಡಿದರು.
ಹೇಳಿಕೆ: ಬಸ್ರೂರು ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧ ದೇವಾಲಯ .ಕಳೆದ ಕೆಲವು ವಷ೯ಗಳಿಂದ ಜೀಣೋ೯ದ್ಧಾರದ ಕಾಯ೯ಗಳು ಸಾವ೯ಜನಿಕರ ಸಹಕಾರದಿಂದ ಮುಗಿಸಿದ್ದು, ಕೊನೆಯ ಹಂತವಾದ ಹೊರ ಪೌಳಿ ಕಾಮಗಾರಿಗೆ ಬಾಕಿ ಇದ್ದು ಸಾವ೯ಜನಿಕರು ಸಹಕರಿಸುವಲ್ಲಿ ಕೋರುತ್ತೇವೆ.
ಶ್ರೀ.ಬಿ.ಅಪ್ಪಣ್ಣ ಹೆಗ್ಡೆ
ಆಡಳಿತ ಧಮ೯ದಶಿ೯
ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು