ಬಿ.ಸಿ.ರೋಡು: ಯಕ್ಷೋತ್ಸವ 2025 ಸಮಾರೋಪ ಸಮಾರಂಭ

0
240

ಯಕ್ಷಾಭಿಮಾನಿ ಬಳಗ ಬಿ.ಸಿ. ರೋಡು ಇವರಿಂದ ಯಕ್ಷೋತ್ಸವ 2025 ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನ ಬಿ.ಸಿ. ರೋಡ್ ಇಲ್ಲಿ ಗೆಜ್ಜೆ ಗಿರಿ ಮೇಳದವರಿಂದ ಐದು ದಿನಗಳ ಯಕ್ಷಗಾನ ಬಯಲಾಟ ಕಾರ್ಯಕ್ರಮ ಸೋಮವಾರದಂದು ಸಮಾರೋಪ ಸಮಾರಂಭ ಶ್ರೀ ಲೋಕನಾಥ್ ಶೆಟ್ಟಿ ಅಧ್ಯಕ್ಷರು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಬಿಸಿ ರೋಡ್ ಅಧ್ಯಕ್ಷತೆಯಲ್ಲಿ ಜರಗಿತ್ತು. ಕರಾವಳಿ ಗಂಡು ಮೆಟ್ಟಿನ ಕಲೆ ಯಕ್ಷಗಾನ ಹಿಂದಿನಿಂದಲೂ ಧರ್ಮಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಧರ್ಮ ಆಚರಣೆಗೆ ಇದು ಪೂರಕವಾಗಿ ಜನರ ಮನ ಪರಿವರ್ತನೆ ಸಾಧ್ಯವಾಗುತ್ತದೆ ಎಂದರು.

ಸಜೀಪ ಮಾಗಣೆ ತಂತ್ರಿ ಎನ್ ಸುಬ್ರಹ್ಮಣ್ಯ ಭಟ್ ಯಕ್ಷಗಾನದಿಂದ ಜನರ ಸತ್ಯ ಧರ್ಮ ನ್ಯಾಯ ನೀತಿ ವಿವೇಚನಾ ಶಕ್ತಿ ವೃದ್ಧಿಗೊಳಿಸುತ್ತದೆ ಎಂದರು ಉದ್ಯಮಿ ಸಂತೋಷ್ ಕುಮಾರ್ ಜಿ ಶೆಟ್ಟಿ ದಳಂದಿಲ ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಮುಂಬೈಯಲ್ಲಿ ಕೂಡ ಪ್ರದರ್ಶನ ಮಾಡುವುದರ ಮೂಲಕ ನಾವು ಯಕ್ಷಗಾನವನ್ನು ಪ್ರೀತಿಸುತ್ತೇವೆ ಯಕ್ಷೋತ್ಸವ ಐದು ದಿನಗಳ ಯಕ್ಷ ಆರಾಧನೆ ಈ ಭಾಗದ ಜನರಿಗೆ ರಸದೌತಣ ನೀಡಿದೆ ಎಂದರು ಉದ್ಯಮಿ ರಾಮ್ ಪ್ರಸಾದ್ ಪೂoಜ .ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಕಾರ್ಯಕ್ರಮದಲ್ಲಿ ಕಲಾವಿದರನ್ನು ನೇಪಥ್ಯ ಕಲಾವಿದರನ್ನು ಗೌರವಿಸಿದ್ದು ಮಾದರಿ ಕಾರ್ಯಕ್ರಮ ಎಂದು ಶುಭ ಹಾರೈಸಿದರು. ಉದ್ಯಮಿ ರವಿ ಪೂಜಾರಿ ಕುರ್ಚಿಗುಡ್ಡೆ ಪ್ರಮೋದ್ ಸಾನದ ಮನೆ ಅರವಿಂದ ಭಟ್ ಪದ್ಯಾಣ ಮೊದಲಾದವರು ಉಪಸ್ಥಿತರಿದ್ದರು ನಾಗರ ಪಂಚಮಿ ತುಳು ಯಕ್ಷಗಾನ ಕಾಲ್ಪನಿಕ ಕಥೆ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here