ಸಪ್ತಪದಿ ತುಳಿದ ಕ್ಷಣದಲ್ಲಿಯೇ ಮದುವೆ ಮಂಟಪದಲ್ಲಿಯೇ ವಧು ವರರಿಂದ ಸಹಿ ಸಂಗ್ರಹಿಸಿದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ….
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ 23-04-2026 ಗುರುವಾರ ಶ್ರೀ ಕ್ಷೇತ್ರ ಮೂಡುಸಗ್ರಿ ಧರ್ಮದರ್ಶಿಗಳಾದ ಶ್ರೀ ಭಾಸ್ಕರ್ ಗುಂಡಿಬೈಲು ರವರ ಪುತ್ರಿ ಚಿ” ಸೌ” ಅಂಜುಶ್ರೀ ವರ ಚಿ” ನಿಖಿತ್ ಮದುವೆ ಸಮಾರಂಭದಲ್ಲಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಿ ಆಶೀರ್ವದಿಸಿದ್ದರು.
ದೇಶದಾದ್ಯಂತ ನಡೆಯುತ್ತಿರುವ ಗೋಮಾತೆಯ ಗೌರವ ಅಭಿಯಾನದ ಆಹ್ವಾನ ಗೋವು ವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕು ಎಂಬ ಅಭಿಯಾನಕ್ಕೆ ನೂತನ ವಧು ವರರಲ್ಲಿ ಮದುವೆ ಮಂಟಪದಲ್ಲಿಯೇ ಸಹಿ ಸಂಗ್ರಹಿಸಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಶುಭ ಹಾರೈಸಿದರು.

