ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಹಸುರುವಾಣಿ ಮೆರವಣಿಗೆ

0
91

ಶಿರ್ವ, ಮೇ 9: ಸೂಡ ಸೊರ್ಪು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಾನದಲ್ಲಿ ಮೇ 9 ರಿಂದ 12ರವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ಮೇ 9ರಂದು ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆಯ బళి ಹಸುರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೇರಳ ಚೆಂಡೆ, ಭಜನ ತಂಡ, ವಾದ್ಯ ಘೋಷಗಳೊಂದಿಗೆ ಶಿರ್ವ ಮುಖ್ಯ ರಸ್ತೆಯ ಮೂಲಕ ಶಿರ್ವ ಕುತ್ಯಾರು ಸರ್ಕಲ್‌ನಲ್ಲಿ ತಿರುಗಿ ಸಂಗೀತಾ ಕಾಂಪ್ಲೆಕ್ಸ್, ತುಂಡುಬಲ್ಲೆಗಾಗಿ ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಾನಕ್ಕೆ ಮೆರವಣಿಗೆಯ ಮೂಲಕ ಹಸಿರುವಾಣಿ ಕೊಂಡೊಯ್ಯಲಾಯಿತು.

ಸೊರ್ಪು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಹರೀಶ್ ಆಚಾರ್ಯ, ಗೌರವಾಧ್ಯಕ್ಷ ಗಣಪತಿ ಜೆ ಆಚಾರ್ಯ, ಕಾರ್ಯದರ್ಶಿ ಸತೀಶ್ ಆಚಾರ್ಯ, ಕೋಶಾಧಿಕಾರಿ ನಯನಾ ಎಸ್.ಆಚಾರ್ಯ, ಉಪಾಧ್ಯಕ್ಷ ರಾಮ ಆಚಾರ್ಯ, ಊರಿನ ಮೊಕ್ತೇಸರ ವಾಮನ ಆಚಾರ್ಯ, ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸವಿತ ವಿ. ಆಚಾರ್ಯ, ಕಾರ್ಯದರ್ಶಿ ಜ್ಯೋತಿ ಎಸ್. ಆಚಾರ್ಯ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ವಿಟ್ಠಲ ಆಚಾರ್ಯ, ಶಿರ್ವ ವಿಶ್ವಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ, ಕುತ್ಯಾರು, ಕಳತ್ತೂರು, ಶಿರ್ವ ಮತ್ತು ಸೊರ್ಪು ವಿಶ್ವಬ್ರಾಹ್ಮಣ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಹತ್ತು ಸಮಸ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here