ಪಾಕಿಸ್ತಾನದ ನಾಲ್ಕು ವಾಯುನೆಲೆಗಳ ಮೇಲೆ ದಾಳಿ ನಡೆಸಿದ ಭಾರತ

0
437

ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿ, ಪ್ರತಿದಾಳಿಗಳು ನಡೆಯುತ್ತಿದೆ. ಪಾಕಿಸ್ತಾನ ಉಗ್ರರು ಪಹಲ್ಗಾಮ್   ಮೇಲೆ ದಾಳಿ ನಡೆಸಿ ಭಾರತೀಯ ನಾಗರಿಕರನ್ನು ಹತ್ಯೆ ಮಾಡಿದ ನಂತರ ಪಾಕ್​​​ ಹಾಗೂ ಭಾರತದ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿದೆ. ಭಾರತ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅಹಂಕಾರ ಪಡುತ್ತಿದ್ದ ಪಾಕ್​​​ಗೆ ಭಾರತದ ಸೇನೆ ತಕ್ಕ ಪಾಠ ಕಲಿಸಿದೆ. ಆಪರೇಷನ್​​ ಸಿಂದೂರ್ ಮೂಲಕ ಉಗ್ರರನ್ನು ಗುರಿಯಾಗಿಸಿ ಪಾಕ್​​​​ ಮೇಲೆ ಭಾರತ ಕಳೆದ ಎರಡು – ಮೂರು ದಿನಗಳಿಂದ ದಾಳಿ ನಡೆಸಿದೆ. ಪಾಕ್ ಕೂಡ ಭಾರತದ ಅನೇಕ ಕಡೆ ದಾಳಿ ನಡೆಸಿದೆ.ಆದರೆ ಅದನ್ನು ಭಾರತದ ಸೈನ್ಯ ಹಿಮ್ಮೆಟ್ಟಿಸಿದೆ. ಇದೀಗ ಭಾರತ ಪಾಕ್​​​ನ ನಾಲ್ಕು ವಾಯುನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿದೆ.

ಶನಿವಾರ ಅಂದರೆ ಇಂದು ಮುಂಜಾನೆ, ಭಾರತ ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನದ ಹಲವು ಕಡೆ ಸ್ಫೋಟಗಳ ಶಬ್ದಗಳು ಕೇಳಿಬಂದಿದೆ. ಪಾಕಿಸ್ತಾನವು ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ರಾಜಧಾನಿ ಇಸ್ಲಾಮಾಬಾದ್ ಬಳಿಯ ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿರುವ ನೂರ್ ಖಾನ್ ವಾಯುನೆಲೆ, ಚಕ್ವಾಲ್ ನಗರದ ಮುರಿಯ್ ವಾಯುನೆಲೆ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆಗಳ ಮೇಲೆ ಭಾರತ ದಾಳಿಯನ್ನು ನಡೆಸಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here