ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೇಶದ ಯೋಧರ ರಕ್ಷಣೆಗೆ ವಿಶೇಷ ಪೂಜೆ

0
47


ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ 19ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂದರ್ಭ ಕ್ಷೇತ್ರದಲ್ಲಿ ಶುಕ್ರವಾರ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಮೂಲಕ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹಗಲಿರುಳು ಹೋರಾಡುತ್ತಿರುವ ಯೋಧರ ರಕ್ಷಣೆಗಾಗಿ ವಿಶೇಷವಾಗಿ ಪೂಜೆ ನಡೆಸಲಾಯಿತು.
ವಿಶೇಷ ಪೂಜೆಯ ನೇತೃತ್ವ ವಹಿಸಿದ್ದ ಶ್ರೀ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಗ್ರಿ ವೇದವ್ಯಾಸ ಐತಾಳ್ ಮಾತನಾಡಿ, ಸನಾತನ ಪರಂಪರೆ, ಪೀಠಾಧಿಪತಿಗಳು, ದಾನ, ಧರ್ಮ, ಯಜ್ಞ, ಯಾಗಾದಿಗಳಿಂದ ನಮ್ಮ ದೇಶ ಪುಣ್ಯಾಾಂಶದಿಂದ ಸಮೃದ್ಧಿ ಹೊಂದಿದೆ. ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಸಾವು-ನೋವಿನ ಪ್ರಮಾಣ ಕಡಿಮೆಯಾಗಿ ಕೆಟ್ಟವರಿಗೆ ಸೋಲು ಸಂಭವಿಸಲು ಶ್ರೀ ದುರ್ಗಾ ಆದಿಶಕ್ತಿ ದೇವಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ ಸರಳಾಯ, ರಾಘವೇಂದ್ರ ಭಟ್, ವಾಮನ ಭಟ್ ಕರಂಬಳ್ಳಿ, ನಾಗಶಯನ ಪದಕಣ್ಣಾಯ, ಸ್ವಸ್ತಿಕ್ ಆಚಾರ್ಯ ಅವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಕ್ಷೇತ್ರದ ಆಡಳಿತ ಮಂಡಳಿಯ ಉಷಾ ರಮಾನಂದ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ಮೃಣಾಲ್ ಕೃಷ್ಣ, ಸ್ವಾತಿ ಪ್ರತೀಕ್ ಭಟ್, ಅರ್ಚಕ ಅನೀಶ್ ಆಚಾರ್ಯ, ಅಲಂಕಾರ ತಜ್ಞ ಆನಂದ ಬಾಯರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here