ಶ್ರೀ ಬ್ರಹ್ಮಮುಗ್ಗೇರ್ಕಳ ದೈವಸ್ಥಾನ, ಪಡ್ಡಮ ಪಡುಭಾಗ ಶ್ರೀ ಬ್ರಹ್ಮಮುಗ್ಗೇರ್ಕಳ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ಅನ್ನಸಂತರ್ಪಣೆ ಹಾಗೂ ನೇಮೋತ್ಸವ ತಾ. 18-05-2025ನೇ ರವಿವಾರ ಪೂರ್ವಾಹ್ನ ಘಂಟೆ 9.06ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಹಿರಿಯಡಕ ಪಡ್ಡಮ ಪಡುಭಾಗದಲ್ಲಿರುವ ಶ್ರೀ ಬ್ರಹ್ಮಮುಗ್ಗೇರ್ಕಳ ದೈವಸ್ಥಾನದ ಜೀರ್ಣೋದ್ಧಾರಪಡಿಸಿದ ನೂತನ ಆಲಯದಲ್ಲಿ ಶ್ರೀ ಬ್ರಹ್ಮಮುಗ್ಗೇರ್ಕಳ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕವು ವೇದಮೂರ್ತಿ ಷಡಂಗ ಶ್ರೀ ಲಕ್ಷ್ಮೀನಾರಾಯಣ ತಂತ್ರಿ ಹಾಗೂ ವೇದಮೂರ್ತಿ ಶ್ರೀ ಅಶ್ವಿನ್ ಆಚಾರ್ಯ ಓಂತಿಬೆಟ್ಟು ಇವರ ನೇತೃತ್ವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು :ದಿನಾಂಕ : 17-05-2025ನೇ ಶನಿವಾರ ಸಂಜೆ ಘಂಟೆ 4.30ಕ್ಕೆ ಗರಡಿಮನೆಯಿಂದ ಭಂಡಾರ ಹೊರಡುವುದು (ಮುಗ್ಗೇರ್ಕಳ ದೈವಕ್ಕೆ ಗರಡಿಮನೆ ಕುಟುಂಬಸ್ಥರು ಕೊಡಮಾಡುವ “ಬೆಳ್ಳಿಯ ಚಪ್ಪರಂ” ಹಾಗೂಪಡ್ಡಮ್ ಮೇಲ್ಮನೆ ಮುದ್ದು ಪೂಜಾರಿ ಇವರು ಕೊಡಮಾಡುವ “ಬಿರುಪಗರಿ”ಯನ್ನು ಭಂಡಾರದೊಂದಿಗೆ ಮೆರವಣಿಗೆಯಲ್ಲಿ ತರುವುದು) ಸಂಜೆ ಘಂಟೆ 7.00 ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ, ರಾಕ್ಟೋಘ್ನ ಹೋಮ, ಸುದರ್ಶನ ಹೋಮ, ಪ್ರಾಸಾದ ಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತು ಬಲಿ, ಬಿಂಬಾಧಿವಾಸ, ಅಧಿವಾಸ ಹೋಮ ದಿನಾಂಕ : 18-5-2025ನೇ ರವಿವಾರ ಘಂಟೆ 7.00 ರಿಂದ ಪುಣ್ಯಾಹವಾಚನ, ಗಣಯಾಗ, ಪ್ರತಿಷ್ಠಾ ಹೋಮ, ಕಲಶ ಆರಾಧನೆ, ಪ್ರಧಾನ ಹೋಮ, ಪ್ರಸನ್ನ ಪೂಜೆ, ಮಹಾಪೂಜೆ ಬೆಳಿಗ್ಗೆ ಘಂಟೆ 9.06ಕ್ಕೆ ಶ್ರೀ ಬ್ರಹ್ಮಮುಗ್ಗೆರ್ಕಳ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಘಂಟೆ 7.00 ರಿಂದ ಅಗೆಲು ತಂಬಿಲ ರಾತ್ರಿ ಘಂಟೆ 9.00 ರಿಂದ ಧರ್ಮರಸು ನೇಮ ದಿನಾಂಕ : 19-05-2025ನೇ ಸೋಮವಾರ ರಾತ್ರಿ ಘಂಟೆ 8.00 ರಿಂದ ಅನ್ನಸಂತರ್ಪಣೆ ರಾತ್ರಿ ಘಂಟೆ 9.00 ರಿಂದ ಮುಗ್ಗೇರ್ಕಳ ದೈವಗಳ ನೇಮ ರಾತ್ರಿ ಘಂಟೆ 11.00 ರಿಂದ ತನ್ನಿಮಾನಿಗ ನೇಮ ದಿನಾಂಕ : 20-05-2025ನೇ ಮಂಗಳವಾರ ಬೆಳಿಗ್ಗೆ ಘಂಟೆ 10.00 ರಿಂದ ಅಲೇರ ಪಂಜುರ್ಲಿ ದೈವದ ನೇಮ ಸಂಜೆ ಘಂಟೆ 7.00 ಕ್ಕೆ ಕುರಿತಂಬಿಲ ನಡೆಯಲಿದೆ.
ವಿ.ಸೂ. : ಹಸಿರುವಾಣಿ ಹೊರೆಕಾಣಿಕೆಯನ್ನು ನೀಡುವವರು ತಾ. 17-05-2025ನೇ ಶನಿವಾರ ಮಧ್ಯಾಹ್ನ 1.00 ಗಂಟೆಯ ಒಳಗೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನೀಡಬಹುದು. (ಸ್ವಸ್ತಿಕ್ ಬ್ರಾಂಡ್ ಅಕ್ಕಿ, ಬೆಲ್ಲ, ತುಪ್ಪ, ತೆಂಗಿನಕಾಯಿ, ಇತ್ಯಾದಿ)