ನಿಟ್ಟೆಯ ದೇಶ ದ್ರೋಹಿ ಗೋಡೆ ಬರಹದ ಪ್ರಕರಣ ಹಳ್ಳ ಹಿಡಿದುದರ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈವಾಡವಿದೆಯೇ?-ನವೀನ್ ನಾಯಕ್ 

0
71

ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲಿನ ಗೋಡೆಯ ಮೇಲೆ ದೇಶದ್ರೋಹಿ, ಹಿಂದೂ ವಿರೋಧಿ ಗೋಡೆಬರಹ ಬರೆದ ಪ್ರಕರಣ ನಡೆದು ಇಷ್ಟು ದಿನಗಳಾದರೂ ಯಾವುದೇ ಸುಳಿವು ಇಲ್ಲದಿರುವುದು ಸಾರ್ವಜನಿಕರಲ್ಲಿ ಸಂಶಯ ಹುಟ್ಟಿಸುತ್ತಿದೆ. ಇಂತಹ ಅಕ್ಷಮ್ಯ ಅಪರಾಧವನ್ನು ಭೇದಿಸಿ ತಪ್ಪಿತಸ್ಥ ದೇಶ ದ್ರೋಹಿಯನ್ನು ಬಂಧಿಸಿ ಶಿಕ್ಷೆ ನೀಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಯಿತೇ? ಅಷ್ಟು ದುರ್ಬಲವಾಯಿತೇ ಪೊಲೀಸ್ ಇಲಾಖೆ?

ಹಾಸ್ಟೆಲ್ ಎಂದ ಮೇಲೆ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿರುತ್ತಾರೆ, ಹಾಸ್ಟೆಲ್ ಆವರಣ ಸಿಸಿ ಕ್ಯಾಮರಾ ಕಣ್ಗಾವಲು ಇರುವ ಸ್ಥಳ, ಎಲ್ಲಾ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯೂ ದಾಖಲಾಗಿರುತ್ತದೆ, ಪ್ರಕರಣದ ಜಾಡು ಹಿಡಿಯಲು ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ, ಪ್ರಕರಣ ಬೇಧಿಸಲು ಪೊಲೀಸ್ ಇಲಾಖೆ ವಿಫಲವಾಗಲು ಕಾರಣವೇನು? ಪೊಲೀಸ್ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಲಾಯಿತೇ? ಅಥವಾ ಕಾಲೇಜಿನ ಆಡಳಿತ ಮಂಡಳಿಯ ಅಸಹಕಾರ ಕಾರಣವಾಯಿತೇ? ಅಥವಾ ರಾಜ್ಯದಲ್ಲಿ ಆಡಳಿತದಲ್ಲಿರುವ ರಾಜಕೀಯ ಪಕ್ಷದ ಒತ್ತಡ ಈ ಪ್ರಕರಣವನ್ನು ಹಳ್ಳ ಹಿಡಿಸಿತೇ? ಎಂಬೆಲ್ಲಾ ಸಂಶಯಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಇದೊಂದು ಸಾಧಾರಣ ಪ್ರಕರಣವಲ್ಲ, ಇದೊಂದು ದೇಶ ದ್ರೋಹಿ ಪ್ರಕರಣ, ಇದನ್ನು ಅಷ್ಟು ಲಘುವಾಗಿ ಪರಿಗಣಿಸುವಂತಿಲ್ಲ, ತಕ್ಷಣ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಬಂಧಿಸುವ ಕಾರ್ಯ ಆಗಬೇಕಿದೆ. ಕಾಲೇಜು ಆಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಪ್ಪಿತಸ್ಥರನ್ನು ಬಂಧಿಸಲು ಯಾವುದೇ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯದೆ ಸಹಕರಿಸಬೇಕು, ಪ್ರತಿಭಟನೆಯ ಎಚ್ಚರಿಕೆಯನ್ನು ABVP ಸಂಘಟನೆ ಈಗಾಗಲೇ ನೀಡಿದೆ, ಮುಂದೆ ಪ್ರತಿಭಟನೆಯನ್ನು ಎದುರಿಸುವ ಪ್ರಸಂಗ ಎದುರಾದೀತು ಎಂದು ನವೀನ್ ನಾಯಕ್ ಅಧ್ಯಕ್ಷರು, ಬಿಜೆಪಿ ಕಾರ್ಕಳ ಮಂಡಲ ತಿಳಿದರು.

LEAVE A REPLY

Please enter your comment!
Please enter your name here