ಮೂಡುಬಿದಿರೆ: ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನ ತಂಡದ ಮೇ ತಿಂಗಳ 98 ನೇ ಯೋಜನೆಯ ಸಹಾಯ ಹಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕೊಡ್ಯಡ್ಕ ಮಿತ್ತಬೈಲ್ ನಿವಾಸಿಯಾದ ದಿ| ಶ್ರೀಪಾಲ ನಾಯ್ಕ್ ಮತ್ತು ಶಾರದಾ ನಾಯ್ಕ್ ದಂಪತಿಗಳ ಮಗನಾದ ಶ್ರೀಕಾಂತ್ 12 ವಯಸ್ಸಿನ ಅವರು ಬೋನ್ ಕ್ಯಾನ್ಸ್ ರ್ ನಿಂದ ಬಳಲುತ್ತಿದ್ದು ಮಣಿಪಾಲ ಕಸ್ತೂರ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರು ಕಡು ಬಡವರಾಗಿದ್ದು ಅವರ ಕಷ್ಟ ಅರಿತ ನಮ್ಮ ತಂಡ ಅವರ ಮನೆಗೆ ಬೇಟಿ ನೀಡಿ ಅವರ ಸಹೋದರತ್ತೆ ಕುಶಲ ನಾಯ್ಕ್ ಅವರಲ್ಲಿ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸದಸ್ಯರಾದ ಭಾಸ್ಕರ ದೇವಾಡಿಗ, ಅಭಿಷೇಕ್ ಶೆಟ್ಟಿ ಐಕಳ, ಗಣೇಶ್ ಪೈ , ದೀನ್ ರಾಜ್ ಕೆ, ಬಸವರಾಜ್ ಮಂತ್ರಿ, ಡಾ.ನಾಗರಾಜ ಶೆಟ್ಟಿ ಅಂಬೂರಿ, ಅರುಣ್ ಅಜೆಕಾರು, ಧನಂಜಯ ಶೆಟ್ಟಿ, ನಿಲೇಶ್ ಕಟೀಲು, ಪ್ರವೀಣ್ ಬಂಗೇರ, ಶ್ರೀಕಾಂತ ಭಟ್ ಪೊನ್ನ ಗಿರಿ, ಪ್ರಭಾಕರ ಮಂಗಳೂರು, ದಯಾನಂದ ಮಡ್ಕೇಕರ್, ಬೀಮಯ್ಯ ಸುಳ್ಯ., ಅಗರಿ ರಾಘವೇಂದ್ರ ಸರ್, ಭಾಸ್ಕರ ದೇವಸ್ಯ. ದಿನೇಶ್ ಸಿದ್ದಕಟ್ಟೆ ಉಪಸ್ಥಿತ ರಿದ್ದರು.