Saturday, June 14, 2025
HomeUncategorizedದಕ್ಷಿಣ ಕನ್ನಡದ ಅಬ್ದುಲ್ ರೆಹಮಾನ್ ಘಟನೆ ನೆಪದಲ್ಲಿ ರಾಜ್ಯದಾದ್ಯಂತದ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ...

ದಕ್ಷಿಣ ಕನ್ನಡದ ಅಬ್ದುಲ್ ರೆಹಮಾನ್ ಘಟನೆ ನೆಪದಲ್ಲಿ ರಾಜ್ಯದಾದ್ಯಂತದ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ !

ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ !

ಬೆಂಗಳೂರು : ಮೇ 27 ರಂದು ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಹತ್ಯೆ ನಂತರ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರನ್ನು ಗುರಿಯಾಗಿಸಿ ಷಡ್ಯಂತ್ರಗಳು ನಡೆಯುತ್ತಿವೆ. ಪೊಲೀಸರು ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ರಾತ್ರೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ತೆರಳಿ, ಕಾರ್ಯಕರ್ತರ ಪೋಟೋ ತೆಗೆಯುವುದು, ಮನೆಗೆ ಜಿಪಿಎಸ್ ಅಳವಡಿಸುವುದು, ನೋಟೀಸ್ ನೀಡದೇ ಠಾಣೆಗೆ ಕರೆಯುವುದು, ಮುಂತಾದ ಕಾನೂನು ಬಾಹಿರ ಕೃತ್ಯಗಳನ್ನು ಮಾಡುತ್ತಿದ್ದು, ಅದರಿಂದ ಹಿಂದೂ ಕಾರ್ಯಕರ್ತರ ಮನೆಯಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಕಳೆದ ರಾತ್ರಿ 15 ಹಿಂದೂ ನಾಯಕರು, ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿವೆ. ಹಲವು ನಾಯಕರಿಗೆ ಗಡಿಪಾರು ಮಾಡಲಾಗಿದೆ. ಆದರೆ ಧ್ವೇಷ ಭಾಷಣವನ್ನು ಮಾಡುವ ಎಸ್‌ಡಿಪಿಐ ಮುಖಂಡರ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಕೋಮು ಹಿಂಸಾಚಾರ ತಡೆ ದಳವನ್ನು ಕೇವಲ ಹಿಂದೂ ಸಂಘಟನೆಗಳ ವಿರುದ್ಧ ಮಾತ್ರ ಪ್ರಯೋಗಿಸಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ವ್ಯಕ್ತಪಡಿಸಿದ್ದಾರೆ. ಅವರು 2 ಜೂನ್ 2025 ಸೋಮವಾರದಂದು ಬೆಂಗಳೂರಿನ ಪೊಲೀಸ್ ಪ್ರಧಾನ ಕಛೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಎಮ್ ಎ ಸಲೀಮ್ ಇವರಿಗೆ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಮನವಿ ನೀಡಿ ಮಾತನಾಡಿದರು. ಈ ವೇಳೆ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ, ವಕೀಲರಾದ ಅಮೃತೇಶ ಎನ್ ಪಿ, ಶ್ರೀ. ಪುನೀತ ಕೆರೆಹಳ್ಳಿ, ಶ್ರೀ. ಸಂತೋಷ ಕೆಂಚಾಂಬ, ಭಜರಂಗದಳದ ಪ್ರಾಂತ ಸಹ ಸಂಯೋಜಕರಾದ ಶ್ರೀ. ಗೋವರ್ಧನ್ ಸಿಂಗ್, ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಶ್ರೀ. ಸುರೇಶ್ ಕುಮಾರ್ ಬಿ, ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಶ್ರೀ. ರಾಜಣ್ಣ, ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರು ಮತ್ತು ವಕೀಲರು ಉಪಸ್ಥಿತರಿದ್ದರು.

ಶ್ರೀ. ಮೋಹನ ಗೌಡ ಮುಂದುವರೆಸಿ, ದಕ್ಷಿಣ ಕನ್ನಡದಲ್ಲಿ ಧ್ವೇಷ ಭಾಷಣ ಮಾಡುವ ಅನ್ಯ ಸಮುದಾಯದ ಮುಖಂಡರ ವಿರುದ್ಧ ದೂರು ನೀಡಿದರೂ ಸಹ ದೂರು ನೊಂದಣಿಯಾಗುವುದಿಲ್ಲ. ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಅವರ ಮೇಲೆ ಪ್ರಕರಣವನ್ನು ದಾಖಲಿಸಿ, ಹಿಂದೂಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತದೆ. ಈ ಎಲ್ಲ ಘಟನೆಗಳಲ್ಲಿ ಸರಕಾರ ಪೊಲೀಸ್ ಇಲಾಖೆಯನ್ನು ಬಳಸಿ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ ನಡೆಸುತ್ತಿದೆ. ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐನ ಅನೇಕ ಸದಸ್ಯರು ಭಾಗಿಯಾಗಿರುವ ಶಂಕೆಯಿದೆ. ಆದರೆ ಪೊಲೀಸರು ಈ ಪ್ರಕರಣದಲ್ಲಿ ಸರಿಯಾಗಿ ತನಿಖೆ ನಡೆಸದೇ ಅನೇಕ ಮುಸಲ್ಮಾನ್ ಧಾರ್ಮಿಕ ಮತ್ತು ರಾಜಕೀಯ ಮುಖಂಡರ ಒತ್ತಡದಿಂದ ಹಿಂದೂ ನಾಯಕರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಇದಲ್ಲದೇ ಮೇ 28 ರಂದು ಬಂಟ್ವಾಳದಲ್ಲಿ ನಡೆದ ಅಬ್ದುಲ್ ರೆಹಮಾನ್ ಅಂತಿಮ ಯಾತ್ರೆ ವೇಳೆ, ದುಷ್ಕರ್ಮಿಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಹಾಗೂ ಕಲ್ಲು ತೂರಾಟ ನಡೆದಿದೆ. ಆದರೆ ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಲಿಲ್ಲ. ಈ ರೀತಿಯಾಗಿ ಸರಕಾರ ಪೊಲೀಸ್ ಇಲಾಖೆಯನ್ನು ಬಳಸಿ ಕೇವಲ ಏಕಮುಖವಾಗಿ ಹಿಂದೂ ನಾಯಕರ ವಿರುದ್ದ ಪ್ರಕರಣವನ್ನು ದಾಖಲಿಸಿ, ಹಿಂದೂ ನಾಯಕರ ಧ್ವನಿ ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ ಎಂದರು.

ಶ್ರೀ. ಪ್ರಮೋದ್ ಮುತಾಲಿಕ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಹಿಂದೂ ನಾಯಕರಿಗೆ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಸೌದಿ ಅರೆಬಿಯಾ ವಾಟ್ಸ್ ಆಪ್ ಆಡಿಯೋ ಸಂದೇಶಗಳು ಬರುತ್ತಿದೆ. ಇಂತಹ ಬೆದರಿಕೆಗಳು ಹತ್ಯೆಗೆ ಮುನ್ನ ಸುಹಾಸ್ ಶೆಟ್ಟಿಯವರಿಗೂ ಬಂದಿದ್ದು, ನಂತರ ಅವರ ಹತ್ಯೆಯಾಗಿತ್ತು. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಅದೇ ರೀತಿಯಲ್ಲಿ ಮಂಗಳೂರಿಗೆ ಕೇರಳದಿಂದ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನರು ಪ್ರತಿಭಟನೆಗೆ ಬುರುವುದು ಅತ್ಯಂತ ಗಂಭೀರ ವಿಷಯವಾಗಿದೆ ಪಿಎಫ್‌ಐ ಸದಸ್ಯರು ಈಗಲೂ ಸಕ್ರಿಯವಾಗಿದ್ದು, ಅವರು ಎಸ್‌ಡಿಪಿಐ ಮೂಲಕ ಕಾರ್ಯ ಮಾಡುತ್ತಿದ್ದಾರೆ, ಸರಕಾರವು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡಿದರು.

ಎಮ್ ಎಲ್ ಶಿವಕುಮಾರ್, ಹಿಂದೂ ನಾಯಕ, ವಿಜಯನಗರ,. ಮಲ್ಲಿಕಾರ್ಜುನ್ ರಾಜು, ಸಂಸ್ಥಾಪಕರು, ಯೂತ್ ಫಾರ್ ಹ್ಯೂಮನ್ ರೈಟ್ಸ್ ಕರ್ನಾಟಕ, ಸುರೇಶ್, ಕಾರ್ಯದರ್ಶಿ, ಅಜಾದ್ ಬ್ರಿಗೇಡ್, ರಾಮನಗರ ಸುಂದ್ರೇಶ್ ನರಗಲ್, ಪ್ರಧಾನ ಕಾರ್ಯದರ್ಶಿ, ಶ್ರೀರಾಮ ಸೇನೆ, ಬೆಂಗಳೂರು, ಪ್ರಸನ್ನ ಡಿ. ಪಿ. ನ್ಯಾಯವಾದಿ, ಕರ್ನಾಟಕ ಉಚ್ಛ ನ್ಯಾಯಾಲಯ, ಎಂ ನಟರಾಜ್, ನ್ಯಾಯವಾದಿ, ಕರ್ನಾಟಕ ಉಚ್ಛ ನ್ಯಾಯಾಲಯ, ದೀಪಕ ಪವಾರ್, ಶಿವ ಘರ್ಜನೆ ಸೇನೆ, ಬೆಂಗಳೂರು ಹಿಂದೂ ಸಂಘಟನೆಗಳ ಗಣ್ಯರು ಉಪಸ್ಥಿತರಿದ್ದರು.

ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ, ಸಂಪರ್ಕ : 7204082609

RELATED ARTICLES
- Advertisment -
Google search engine

Most Popular