ವಿಧಾನ ಪರಿಷತ್ತಿನಲ್ಲಿ ನೀಡಿದ ಆಶ್ವಾಸನೆಯಂತೆ ಕೊಂಕಣಿ ಸಾಹಿತ್ಯ ಅಕಾಡೆಮಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿಸೋಜಾರವರಿಂದ ಮಾನ್ಯ ಸಚಿವರಾದ ಶಿವರಾಜ ತಂಗಡಿಗೆ ಭೇಟಿ.
ಕಳೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿನ ಮಾನ್ಯ ಶಾಸಕರಾದ ಶ್ರೀ ಐವನ್ ಡಿಸೋಜಾ ರವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು ಮಂಗಳೂರಿಗೆ ಭೇಟಿ ನೀಡಿ ಕಟ್ಟಡಕ್ಕೆ ಬೇಕಾಗುವ ಎಲ್ಲಾ ಅನುದಾನ ಒದಗಿಸಿ ಮುಂದಿನ ಅಧಿವೇಶನದಲ್ಲಿ ಒಳಗೆ ಪೂರ್ಣಗೊಳಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಶಿವರಾಜ್ ಎಸ್ ತಂಗಡಗಿ ರವರು ಸದನದಲ್ಲಿ ನೀಡಿದ ಭರವಸೆಯಂತೆ ಇಂದು ಭೇಟಿ ಮಾಡಿ ಆಶ್ವಾಸನೆ ಈಡೇರಿಸುವಂತೆ ಮಾನ್ಯ ಸಚಿವರನ್ನು ಒತ್ತಾಯಿಸಲಾಯಿತು.
ಮಾನ್ಯ ಸಚಿವರಾದ ಶ್ರೀ ಶಿವರಾಜ್ ಎಸ್ ತಂಗಡಗಿ ರವರು ಈ ಬಗ್ಗೆ ನಾನೇ ಖುದ್ದಾಗಿ ಸದ್ಯದಲ್ಲೇ ಮಂಗಳೂರಿಗೆ ಭೇಟಿ ನೀಡಿ, ತಮ್ಮ ಬೇಡಿಕೆಯಾದ ಕೊಂಕಣಿ ಸಾಹಿತ್ಯ ಅಕಾಡೆಮಿ ಕಟ್ಟಡ ಕಾಮಗಾರಿಯನ್ನ ಸ್ವತಃ ವೀಕ್ಷಿಸಿ, ಅದಕ್ಕೆ ತಗಲುವ ಅನುದಾನವನ್ನು ಒದಗಿಸಿಕೊಡುತ್ತೇನೆಂದು ಭರವಸೆ ನೀಡಿದ್ದಾರೆ.