ಪುದು ಮಹಾ ಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಕುಲಾಲ ಸಮುದಾಯ ಭವನ ಮಾರಿಪಲ್ಲದಲ್ಲಿ ಆಚರಿಸಲಾಯಿತು.
ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿಯವರು ಉದ್ಘಾಟಿಸಿದರು. ಮಂಗಳೂರು ಮಂಡಲದ ಉಪಾಧ್ಯಕ್ಷರಾದ ಮನೋಜ್ ಆಚಾರ್ಯ, ಓ ಬಿ ಸಿ ಮೋರ್ಚಾದ ಮಂಡಲ ಅಧ್ಯಕ್ಷರಾದ ಗಣೇಶ್ ಸುವರ್ಣ, ಜಿಲ್ಲಾ ಎಸ್ ಸಿ ಮೋರ್ಚಾದ ಉಪಾಧ್ಯಕ್ಷರಾದ ವಿಠ್ಠಲ್ ಸಾಲಿಯಾನ್ ಕುಮುಡ್ದೆಲ್ ಫಲಾನುಭವಿ ಪ್ರಕೋಷ್ಠ ದ ಜಿಲ್ಲಾ ಸಂಚಾಲಕರಾದ ಜಯಶ್ರೀ ಕರ್ಕೇರ ಅಬ್ಬೆಟ್ಟು, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುಂಚಮೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತೇವು, ಪ್ರಧಾನ ಕಾರ್ಯದರ್ಶಿ ರೂಪೇಶ್ ಜ್ಯೋತಿ ಗುಡ್ಡೆ, ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು, ಉಪಸ್ಥಿತರಿದ್ದರು