ಪುತ್ತೂರಿನಲ್ಲಿ ಮೇಳೈಸಿದ ಸಾಹಿತ್ಯ,ಗಾನ ನೃತ್ಯ ವೈಭವ

0
35

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು,ಶಿವಮಣಿ ಕಲಾ ಸಂಘ ಪುತ್ತೂರು ಸಹಯೋಗದೊಂದಿಗೆ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ನಟರಾಜ ವೇದಿಕೆ ಯಲ್ಲಿ ಬಾನುವಾರ ಶತ ಸಂಭ್ರಮ ಪೊಟ್ಟಿಪ್ಪಲ ಆಶುಕವಿ ಶ್ರೀ ಕೀರ್ತಿ ಶೇಷ ನಾರಾಯಣ ಭಟ್ ರವರಿಗೆ ನುಡಿನಮನ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಭಜನೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿಸಾಹಿತಿ,ಸಂಘಟಕಿ, ಸರಕಾರಿ ಪ್ರೌಢಶಾಲೆ ಕಬಕ ದ ಶಿಕ್ಷಕಿ ಬೊಳುವಾರು ನಿವಾಸಿ ಡಾ.ಶಾಂತಾ ಪುತ್ತೂರು ರವರಿಗೆ ಪೊಟ್ಟಿಪ್ಪಲ ನಾರಾಯಣ ಭಟ್ ಆಶುಕವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇದೇ ವೇದಿಕೆಯಲ್ಲಿ ಶ್ರೀ ಜಯಾನಂದ ಪೆರಾಜೆ, ರಾಣಿಪುಷ್ಪಲತಾ ದೇವಿ,ಗಂಗಾಧರ ಗಾಂಧಿ ಯವರನ್ನು ಗೌರವಿಸಲಾಯಿತು.ಶ್ರೀ ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷ ರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ದೀಪ ಪ್ರಜ್ವಲನೆ ಮಾಡಿದರು.ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ರಾದ ಶ್ರೀ ಉಮೇಶ್ ನಾಯಕ್ ಪುತ್ತೂರುರವರು ಶತಸಂಭ್ರಮ ಉದ್ಘಾಟನೆ ಮಾಡಿದರು.ಡಾ.ವೆಂಕಟ ಗಿರೀಶ್ ಪ್ರಕೃತಿ ಆಯುರ್ವೇದ ಆಸ್ಪತ್ರೆ ಚೂರಿಪಳ್ಳ ಸಭಾಧ್ಯಕ್ಷತೆ ವಹಿಸಿದ್ದರು.ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಪ್ರೇಮಲತಾರಾವ್.ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ಅಧ್ಯಕ್ಷೆ ಡಾ.ವಾಣಿಶ್ರೀ ಕಾಸರಗೋಡು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಹಾಗೂ,ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು.ಡಾ.ವಾಣಿಶ್ರೀ ಕಾಸರಗೋಡು ಸ್ವಾಗತಿಸಿದರು.ಮನುಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ರಾಜಶೇಖರ ದಾವಣಗೆರೆ ಕಾರ್ಯಕ್ರಮ ನಿರೂಪಿಸಿದರು.ಅಚ್ಚುತ ಭಟ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here