
“ವಿಕ್ರಂ ಸಾರಾಭಾಯಿ ಹಾಗೂ ಹೋಮಿ ಜೆ ಬಾಬಾ ರಂತಹ ವ್ಯಕ್ತಿಗಳ ದೂರದೃಷ್ಟಿಯಿಂದಇಸ್ರೋ ಹುಟ್ಟಿಕೊಂಡಿತು. ಇಂದು ಭಾರತದ ಬೆಳವಣಿಗೆಯಲ್ಲಿ ಇಸ್ರೋ ಮಹತ್ತರ ಪಾತ್ರ ವಹಿಸಿದೆ. ದೇಶದ ಸಂಪರ್ಕಅಥವಾ ಸಂವಹನ ಕಾರ್ಯಕ್ರಮಗಳ ಬೆಳವಣಿಗೆಯಲ್ಲಾಗಲೀ, ಕೃಷಿ, ಮೀನುಗಾರಿಕೆ, ರಕ್ಷಣೆ, ಹವಾಮಾನ, ನ್ಯಾವಿಗೇಶನ್ ಮುಂದಾದ ಹತ್ತು ಹಲವು ಕ್ಷೇತ್ರಗಳ ಬೆಳವಣಿಗೆಯಲ್ಲಿ ಇದು ಸಹಕಾರಿಯಾಗಿದೆ. ಇಂದು ಸಾಮಾನ್ಯಜನರಿಗೂದೇಶದಅತ್ಯುನ್ನತತಂತ್ರಜ್ಞಾನ ಬಳಕೆಗೆ ಲಭಿಸುವಂತೆಇಸ್ರೋ ಮಾಡಿದೆ. ಭಾರತ ಕಳೆದ ಹಲವಾರು ವರ್ಷಗಳಿಂದ ಬಾಹ್ಯಾಕಾಶಕ್ಷೇತ್ರದಲ್ಲಿತನ್ನದೇಆದ ಸಾಮರ್ಥ್ಯವನ್ನು ಬೆಳೆಸುತ್ತಾ ಬಂದಿದೆ ಹಾಗೂ ಇಂದುಜಗತ್ತಿನ ಬಾಹ್ಯಾಕಾಶಕ್ಷೇತ್ರದಲ್ಲಿ ಸಾಧನೆ ಮಾಡಿದಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದ ಉಪಗ್ರಹಗಳಲ್ಲದೆ 34 ಕ್ಕೂ ಹೆಚ್ಚು ರಾಷ್ಟ್ರಗಳ 450 ಕ್ಕೂ ಹೆಚ್ಚು ಉಪಗ್ರಹಗಳನ್ನು ಭಾರತಉಡಾವಣೆ ಮಾಡಿದೆ. ಚಂದ್ರಯಾನ, ಮಂಗಳಯಾನ, ಆದಿತ್ಯ ಮುಂತಾದ ಹಲವಾರುಉಪಗ್ರಹ ಕಾರ್ಯಕ್ರಮಗಳ ಮೂಲಕ ಭಾರತದ ಸಾಮರ್ಥ್ಯವನ್ನುಜಗತ್ತುಇಂದುಅರಿತುಕೊAಡಿದೆ. ಜಗತ್ತಿನಎಲ್ಲಾ ದೇಶಗಳು ಮಿಲಿಟರಿ ಅವಶ್ಯಕತೆಗಳಿಗಾಗಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರೆ, ಸಾಮಾನ್ಯಜನರಅಥವಾದೇಶದ ಸಮಸ್ಯೆಗಳ ಪರಿಹಾರಕ್ಕಾಗಿ ಬಾಹ್ಯಾಕಾಶಕಾರ್ಯಕ್ರಮ ಪ್ರಾರಂಭಿಸಿದ ಏಕೈಕ ದೇಶ ಭಾರತ. ಮಾನವನನ್ನ ಬಾಹ್ಯಾಕಾಶಕ್ಕೆಕೊಂಡೊಯ್ಯುವಗಗನಯಾನ ಭಾರತದ ಮುಂದಿರುವ ಮಹತ್ವಾಕಾಂಕ್ಷಿಯೋಜನೆಯಾಗಿದೆ. ಇಂದು ನಾವು ಪ್ರತಿಯೊಬ್ಬರೂ ಬಾಹ್ಯಾಕಾಶದ ಸಂಶೋಧನೆ ನಮ್ಮ ಹಂತದಲ್ಲಿ ಮಾಡಬೇಕಿದೆ ನಾವು ಪ್ರತಿಯೊಬ್ಬರೂ ವಿಜ್ಞಾನಿಯಾಗಬೇಕಿದೆ ಹಾಗೂ ದೇಶದ ಬೆಳವಣಿಗೆಯಲ್ಲಿ ಪಾಲುದಾದರಾಗಬೇಕಿದೆ.” ಎಂದುಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ “ISRO’s ಮಾಜಿಅಧ್ಯಕ್ಷರಾದ ಪದ್ಮಶ್ರೀ ಡಾ. ಎ. ಎಸ್. ಕಿರಣ್ಕುಮಾರ್ಅವರು “ISRO’s Legacy and Beyond”ಕಾರ್ಯಕ್ರಮದಲ್ಲಿ ಹೇಳಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ಹಾಗೂ ಸಮತಾ (ರಿ) ಮಹಿಳಾ ಬಳಗ, ಮಂಗಳೂರಿನ ಸಂಯುಕ್ತಆಶ್ರಯದಲ್ಲಿ “ISRO’s ಎಂಬ ಶೀರ್ಷಿಕೆಯೊಂದಿಗೆ ವಿಶಿಷ್ಟ ಉಪನ್ಯಾಸಕಾರ್ಯಕ್ರಮ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಿತು. ಬಾಹ್ಯಾಕಾಶದ ಸಾಧನೆಗಳ ಸುತ್ತ ಬೆಳಕು ಚೆಲ್ಲುವ, ವೈಜ್ಞಾನಿಕ ವಿಷಯಗಳು ಮತ್ತು ಪ್ರೇರಣಾದಾಯಿ ವಿಷಯಗಳನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿಗಳಾದ ಸ್ವಾಮಿಜಿತಕಾಮಾನಂದಜಿ ದಿವ್ಯಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಕರ್ನಾಟಕ ಬ್ಯಾಂಕ್ನಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ ಘಾಟೆಅವರುಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ಮಂಗಳೂರಿನ ಸಮತಾ ಮಹಿಳಾ ಬಳಗದ ಅಧ್ಯಕ್ಷರಾದಕಾತ್ಯಾಯನಿ ಭಿಡೆ ವಹಿಸಿದ್ದರು.ISRO Launch Vehicle Programme Office ನ ಮಾಜಿ ನಿರ್ದೇಶಕರಾದ ಹಾಗೂ IISಛಿಬೆಂಗಳೂರು ನ ಮಾಜಿ ಪ್ರಾಧ್ಯಾಪಕರಾದಡಾ. ಎಂ. ಎಂ. ನಾಯಕ್, ಸಮತಾ ಮಹಿಳಾ ಬಳಗದ ಗೌರವಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿರಾವ್ಹಾಗೂ ಕರ್ನಾಟಕ ವಿಧಾನ ಪರಿಷತ್ ನ ಸದಸ್ಯರಾದಡಾ. ಮಂಜುನಾಥ ಭಂಡಾರಿಅವರುಅತಿಥಿಯಾಗಿ ಭಾಗವಹಿಸಿದ್ದರು. ಸಮತಾ ಬಳಗ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ಪದ್ಮಶ್ರೀ ಡಾ. ಕಿರಣ್ಕುಮಾರ್ಅವರಿಗೆ ಸನ್ಮಾನಿಸಲಾಯಿತು. ಸಂವಾದಕಾರ್ಯಕ್ರಮವನ್ನು ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದರAಜನ್ ಬೆಳ್ಳರ್ಪ್ಪಾಡಿ ನಿರ್ವಹಿಸಿದರು. ಪ್ರಾಧ್ಯಾಪಕರಾದ ಸಂತೋಷ್ ಆಳ್ವ ಎಕ್ಕಾರು ಹಾಗೂ ಶ್ರೀಮತಿ ಅನುಪಮಾಅನಂತಮೂರ್ತಿಅವರು ನಿರ್ವಹಿಸಿದರು.
ಸ್ಪೇಸ್ಆನ್ ವೀಲ್ಸ್ ಪ್ರದರ್ಶನ
“ISRO’ದಇತಿಹಾಸ, ಸಾಧನೆಗಳು ಹಾಗೂ ಭವಿಷ್ಯದದೃಷ್ಟಿಕೋನದಕುರಿತುಉಪನ್ಯಾಸದಜೊತೆಗೆ ಬೆಂಗಳೂರಿನ ಯು. ಆರ್. ರಾವ್ಉಪಗ್ರಹಕೇಂದ್ರ, ಬೆಂಗಳೂರು ಇವರು ನಿರ್ವಹಿಸುವ ಚಲಂತ ವಿಜ್ಞಾನ ಪ್ರದರ್ಶನSPಂಅಇ ಔಓ WಊಇಇಐS ನಡೆಯಿತು. ವಿಶೇಷವಾಗಿ ನಿರ್ಮಿಸಲಾದ ಬಸ್ ಒಂದು ಬೆಂಗಳೂರಿನಿAದ ಈ ಪ್ರದರ್ಶನಕ್ಕಾಗಿ ಆಗಮಿಸಿತ್ತು. ಸುಮಾರು 1000 ಕ್ಕೂ ಹೆಚ್ಚು ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ವೀಕ್ಷಿಸಿದರು.