ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆ, ವಿದ್ಯಾಗಿರಿ ಬಂಟ್ವಾಳ:ವಿಶ್ವ ಯೋಗ ದಿನಾಚರಣೆ

0
8


ಬಂಟ್ವಾಳ: ಮನುಷ್ಯನ ಸಾಧನೆಗೆ ಏಕಾಗ್ರತೆ ಆತ್ಯಮೂಲ್ಯ. ಯೋಗಾಭ್ಯಾಸದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಬಲಗೊಳಿಸಲು ಸಾಧ್ಯವಿದೆ. ಅಮೂಲ್ಯವಾದ ಯೋಗ ವಿದ್ಯೆಯು ನಮ್ಮ ಸನಾತನ ಭಾರತೀಯರ ಕೊಡುಗೆ ಎಂದು ಯೋಗ ತರಬೇತುದಾರÀ ಶ್ರೀ ಚನ್ನಕೇಶವ ಡಿ.ಆರ್ ರವರು ಹೇಳಿದರು.
ಅವರು ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆ ವಿದ್ಯಾಗಿರಿ ಬಂಟ್ವಾಳ ಇದರ ಆಶ್ರಯದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಾಳಿಪಟದಂತೆ ಹರಿದಾಡುವ ಮನಸ್ಸಿಗೆ ನಿತ್ಯ ಯೋಗಾಭ್ಯಾಸದಿಂದ ಹತೋಟಿಗೆ ತರಲು ಸಾಧ್ಯ ವಿದ್ಯಾರ್ಥಿಗಳು ಯೋಗವನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ, ಬಿ.ಆರ್.ಎಮ್.ಪಿ.ಸಿ. ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್, ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಉಪಸ್ಥಿತರಿದ್ದರು.
ಕರ‍್ಯಕ್ರಮದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆಗಳ ಉಪನ್ಯಾಸಕರು, ಅಧ್ಯಾಪಕೇತರ ವರ್ಗದವರು ಹಾಜರಿದ್ದರು. ಎಸ್.ವಿ.ಎಸ್. ಕಾಲೇಜು ಎನ್.ಸಿ.ಸಿ ವಿದ್ಯಾರ್ಥಿಗಳು ಮತ್ತು ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯೋಗ ತರಬೇತುದಾರÀ ಶ್ರೀ ಚನ್ನಕೇಶವ ಡಿ.ಆರ್ ರವರು ವಿದ್ಯಾರ್ಥಿಗಳಿಗೆ ಯೋಗದಿನದ ಶಿಷ್ಟಾಚಾರದ ಅನುಸಾರ ವಿವಿಧ ಆಸನಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು
ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಕಾಲೇಜು ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್. ಪ್ರದೀಪ್ ಪೂಜಾರಿ ಸ್ವಾಗತಿಸಿದರು. ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆ ಎನ್.ಸಿ.ಸಿ. ಅಧಿಕಾರಿ ರವಿ ವಂದಿಸಿ, ಜ್ಯೂನಿರ್ ಅಂಡರ್ ಆಫಿಸರ್ ಸ್ಫೂರ್ತಿ ಕರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here