ಮಂಗಳೂರು ಪ್ರದೇಶಾಭಿವೃದ್ದಿ ನಿಧಿಯಿಂದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ

0
11

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ವಿಧಾನಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ಪ್ರದೇಶಾಭಿವೃದ್ದಿನಿಧಿಯಿಂದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ದಿನಾಂಕ:23-06-2025 ರಂದು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾಗಿರುವ ಅನುದಾನದಿಂದ ಬಿಡುಗಡೆಮಾಡಲಾದ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದು, ಸದರಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದ ವಿವರ ಈ ಕೆಳಗಿನಂತಿದೆ.

  1. ಬೆಳಿಗ್ಗೆ 9:30ಕ್ಕೆ ಇನ್ಪೆಂಟ್‌ ಜೀಸಸ್‌ ಚರ್ಚ್‌ನ ಸಂಪರ್ಕ ರಸ್ತೆ ಉದ್ಘಾಟನೆ
  2. ಬೆಳಿಗ್ಗೆ 10:00ಕ್ಕೆ ಆಡಂಕುದ್ರು ಎಂಬಲ್ಲಿ ಕಾಂಕ್ರೀಟೀಕರಣಗೊಂಡ ಚಾಪೆಲ್‌ ರಸ್ತೆ ಉದ್ಘಾಟನೆ
  3. ಬೆಳಿಗೆ 10:30ಕ್ಕೆ ಜೆಪ್ಪು ನಂದಿಗುಡ್ಡ ಕೋಟಿ-ಚನ್ನಯ್ಯ ಸರ್ಕಲ್‌, ಅತ್ತಾವರ ಬಾಬುಗುಡ್ಡೆ,
    ಅತ್ತಾವರ ಸರಕಾರಿ ಶಾಲೆಯ ಬಳಿ ಹಾಗೂ ಹಂಪನಕಟ್ಟೆ ತಾಜ್‌ ಮಹಲ್‌ ಬಳಿ
    ನಿರ್ಮಿಸಲಾದ ರಿಕ್ಷಾ ತಂಗುದಾಣಗಳ ಉದ್ಘಾಟನೆ.

ಎಂದು ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here