ಮೂಡುಬಿದಿರೆ: ಆರೋಗ್ಯ ಉಚಿತ ತಪಾಸಣಾ ಶಿಬಿರ

0
62

ಮೂಡುಬಿದಿರೆ: ಜಿಲ್ಲೆಯ ಅಲ್ಲಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಿರುವುದರಿಂದ ಜನರಿಗೆ ಮೊದಲ ಹಂತದಲ್ಲಿ ಆರೋಗ್ಯದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯವಿದ್ದರೆ ಮಾತ್ರ ಸಾಧನೆ ಮಾಡಲು ಸಹಕಾರಿ. ಹಿಂದಿನ ಚಿಕಿತ್ಸಾ ಪದ್ಧತಿ ಹಾಗೂ ಈಗಿನ ಚಿಕಿತ್ಸಾ ಪದ್ಧತಿಗೆ ಬಹಳಷ್ಟು ವ್ಯತ್ಯಾಸವಿದೆ. ಇಂದು ತಂತ್ರಜ್ಞಾನಗಳಿAದಾಗಿ ಯಾವುದೇ ರೋಗಗಳನ್ನು ತಕ್ಷಣ ಕಂಡು ಹಿಡಿದು, ಚಿಕಿತ್ಸೆ ನೀಡಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.


ಕರ್ನಾಟಕ ಸರ್ಕಾರ ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ಮೂಡುಬಿದಿರೆ ತಾಲೂಕು, ಬಂಟರ ಮಹಿಳಾ ಘಟಕ, ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ನಿರಾಮಯ ಮಲ್ಟಿ ಸ್ಪಷಾಲಿಟಿ ಆಯುಷ್ ಆಸ್ಪತ್ರೆ ವಿದ್ಯಾಗಿರಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಮಾಜಂದಿರದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳು ಬಡವರು, ಮಧ್ಯಮವರ್ಗದವರಿಗೆ ಸಹಕಾರಿಯಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ದ.ಕ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರಿಗೆ ವಿಶೇಷವಾಗಿ ಆಧ್ಯತೆ ನೀಡಿ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡುವುದು ಮುಖ್ಯ. ಆರೋಗ್ಯವಂತ ಮಹಿಳೆಯಿಂದಾಗಿ ಇಡೀ ಕುಟುಂಬ ಆರೋಗ್ಯವಾಗಿರಲು ಸಾಧ್ಯ ಎಂದರು.
ಆಳ್ವಾಸ್ ಆಸ್ಪತ್ರೆಯ ಸ್ತಿçÃರೋಗ ತಜ್ಞೆ ಡಾ.ಹನಾ ಶೆಟ್ಟಿ ಆರೋಗ್ಯ ಮಾಹಿತಿ ನೀಡಿದರು.
ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ತಾಲೂಕು ಮುಖ್ಯ ನಿರ್ವಾಹಣಾಧಿಕಾರಿ ಬಿ.ಕುಸುಮಾಧರ, ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್.ಹೆಗ್ಡೆ, ಮಹಿಳಾ ಮತ್ತು ಮಕ್ಕಳ ಶುಭಾ, ಕಾತ್ಯಾಯಿನಿ. ಮೆಸ್ಕಾಂ ಎಡಬ್ಯು÷್ಲ ಮೋಹನ ಇರುವೈಲ್, ಕೆಎಸ್‌ಆರ್‌ಟಿ, ಆಹಾರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಜೈಸನ್ ಪಿರೇರಾ ಸ್ವಾಗತಿಸಿದರು. ರಾಜೇಶ್ ಕಡಲಕೆರೆ ನಿರೂಪಿಸಿದರು. ಕ್ಲಾರಿಯೊ ವಂದಿಸಿದರು. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಜ್ಞರು, ಪ್ರಸೂತಿ ಮತ್ತು ಸ್ತಿçà ರೋಗ ತಜ್ಞರು, ಎಲುಬು ಮತ್ತು ನರರೋಗ ತಜ್ಞರು ಭಾಗವಹಿಸಿದ್ದರು. ಬ್ಲಡ್ ಶುಗರ್ ಟೆಸ್ಟ್ ಹಿಮೋಗ್ಲೋಬಿನ್ ತಪಾಸಣೆ ನಡೆಯಿತು.

ವರದಿ :ಜಗದೀಶ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here