ಅ. 30 ರಿಂದ ನ. 1 ರವರೆಗೆ ’ಮಂಗಳೂರು ದಿವಾ – ಮಿಡಲ್ ಈಸ್ಟ್ 2025’ ಸ್ಪರ್ಧೆ

0
83


ಮಂಗಳೂರಿನ ಮಹಿಳೆಯರಿಗೆ ನೋಂದಣಿ, ಅಡಿಷನ್‌

ಮಂಗಳೂರು: ಕರಾವಳಿ ಪ್ರದೇಶದ ಮಹಿಳೆಯರ ಸೊಬಗು, ಪ್ರತಿಭೆ ಮತ್ತು ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಲು ದುಬೈ ನ ಗೋಷೆನ್ ಇವೆಂಟ್ಸ್ ಮೀಡಿಯಾ ಕಂಪನಿ ಹಾಗೂ ಪ್ರಿಯಾ ಫ್ಯಾಶನ್ ವತಿಯಿಂದ ಯು.ಎ.ಇ. ಅಜ್ಮನ್ ತುಂಬೆ ಮೆಡಿಸಿಟಿಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ’ಮಂಗಳೂರು ದಿವಾ-ಮಿಡಲ್ ಈಸ್ಟ್ 2025’ವಿಶೇಷ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಯನ್ನು ಅ. 30 ರಿಂದ ನ. 1 ರವರೆಗೆ ದುಬೈ ನಲ್ಲಿಆಯೋಜಿಸಲಿದ್ದು, ಇದಕ್ಕೆ ಪೂರ್ವಾಭಾವಿಯಾಗಿ ಆನ್ ಲೈನ್ ನಲ್ಲಿ ಅರ್ಜಿ ಅಹ್ವಾನಿಸಲಾಗಿದೆ ಹಾಗೂ ಮಂಗಳೂರಿನಲ್ಲಿ ಅಡಿಷನ್ ಕೂಡಾ ನಡೆಯಲಿದೆ ಎಂದು ಗೋಷೆನ್ ಇವೆಂಟ್ಸ್ ಮೀಡಿಯಾ ದ ಸಂಸ್ಥಾಪಕಿ ಸಬಿತಾ ಕಾರ್ಲೋ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಿಸ್ (21-35 ಅವಿವಾಹಿತ) ಮತ್ತು ಮಿಸೆಸ್ (24 ವರ್ಷಕ್ಕಿಂತ ಮೇಲ್ಪಟ್ಟ – ವಿವಾಹಿತ/ವಿಚ್ಛೇದಿತ) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮಂಗಳೂರು ಹಾಗೂ ದೇಶದೆಲ್ಲೆಡೆಯಿರುವ ಮಂಗಳೂರು ಮೂಲದ ಮಹಿಳೆಯರು ಪ್ರತಿಷ್ಠಿತ ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಬೇಕೆನ್ನುವ ದೃಷ್ಠಿಯಿಂದ ಮಂಗಳೂರು, ಬೆಂಗಳೂರು, ಮುಂಬಯಿ ಸೇರಿದಂತೆ ನಾನಾ ನಗರಗಳಲ್ಲಿ ಪ್ರಾದೇಶಿಕ ಆಡಿಷನ್‌ಗಳು ನಡೆಯಲಿದೆ. ಈಗಾಗಲೇ ಇನ್ಸ್ಟಾಗ್ರಾಮ್, ಗೂಗಲ್ ಫಾರ್ಮ್ ಹಾಗೂ ವಾಟ್ಸಾಪ್ ಮೂಲಕ ಆನ್ ಲೈನ್ ನಲ್ಲಿ ನೋಂದಣಿ ಮಾಡಲು ಅವಕಾಶ ನೀಡಲಾಗಿದ್ದು, ಆ. 31 ಕೊನೆಯ ದಿನವಾಗಿದೆ. ಸೆಪ್ಟೆಂಬರ್ ನಲ್ಲಿ ಮಂಗಳೂರಿನ ಅಡಿಷನ್ ನಡೆಯಲಿದೆ. ಸ್ಪರ್ಧಿಗಳಿಗೆ 2 ದಿನಗಳ ವರ್ಕ್ ಶಾಪ್ ಕೂಡಾ ನಡೆಯಲಿದೆ. ಸ್ಪರ್ಧೆಯಲ್ಲಿ ಸಾಂಸ್ಕೃತಿಕ ಸಮ್ಮಿಲನದ ಸುತ್ತುಗಳಲ್ಲಿ ಕರಾವಳಿ ಸೊಬಗನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಉಡುಪು, ಪಾಶ್ಚಾತ್ಯ ಉಡುಪು, ಪ್ರಶ್ನೋತ್ತರ ವಿಭಾಗಗಳಿವೆ. ವಿಜೇತರು ನಗದು ಬಹುಮಾನ, ಟ್ರೋಫಿ, ಕಿರೀಟ ಧಾರಣೆ, ಬ್ರಾಂಡ್ ರಾಯಭಾರಿ ಅವಕಾಶ ಮತ್ತು ಕೋಸ್ಟಲ್‌ವುಡ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಸಮಾಜದಲ್ಲಿ ಮಹಿಳೆಯರ ಗುರುತು, ಸಂಸ್ಕೃತಿ ಮತ್ತು ವಿಕಸನಗೊಳಿಸಲು ಈ ಸ್ಪರ್ಧೆಯು ಮಹತ್ತರ ಪಾತ್ರ ವಹಿಸಲಿದೆ ಎಂದು ಹೇಳಿದರು.

ಗೋಷೆನ್ ಇವೆಂಟ್ಸ್ ಮೀಡಿಯಾ ದ ಸ್ಥಾಪಕಿ ದೇಚಮ್ಮ ಪೂಣಚ್ಚ ಬಳಿಮನೆ, ಪ್ರಿಯಾ ಫ್ಯಾಶನ್ ಸ್ಥಾಪಕಿ ಪ್ರಿಯಾ ಫೆರ್ನಾಂಡಿಸ್, ಗೌತಮ್ ಬಂಗೇರ, ಚೈತ್ರಾ ಶೆಟ್ಟಿ, ಸಮತಾ ಅಮೀನ್ ಹಾಗೂ ಸಿದ್ದಾರ್ಥ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here