ನಿಸ್ವಾರ್ಥ ಸೆವಾ ಮನೋಬಾವದಿಂದ ಕಾರ್ಯನಿರ್ವಹಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ – ಡಾ. ದೇವದಾಸ್ ರೈ
ಮಂಗಳೂರು ಜುಲೈ 10: “ಸಂಸ್ಥೆಯ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡಿಸಿ ಬಲಪಡಿಸಬೇಕು. ಸಂಸ್ಥೆಯಲ್ಲಿ ನವೀನತೆಯನ್ನು ಪರಿಚಯಿಸಬೇಕು. ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು.” ಎಂದು ರೋಟರಿ ಜಿಲ್ಲಾ 3181 ರ ಮಾಜಿ ಗವರ್ನರ್ ಡಾ. ದೇವದಾಸ್ ರೈ ರವರು ಸಲಹೆ ನೀಡಿದ್ದಾರೆ. ಅವರು ತಾ: 09.07.2025 ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ದೇರಳಕಟ್ಟೆ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಾಗ್ರಹಣದ ವಿಧಿವಿಧಾನವನ್ನು ನೆರವೇರಿಸಿ ಪದಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನೂತನ ತಂಡಕ್ಕೆ ಶುಭ ಹಾರೈಸಿದರು.
ರೋಟರಿ ಜಿಲ್ಲಾ ವಲಯ ಸಹಾಯಕ ಗವರ್ನರ್ ಡಾ. ರವಿಶಂಕರ್ ರಾವ್‌ರವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ಸಂಸ್ಥೆಗೆ ತಮ್ಮ ಪೂರ್ಣ ಸಹಕಾರ ನೀಡುವ ಆಶ್ವಾಸನೆ ನೀಡಿ ವಿಕ್ರಮ್ ದತ್ತ ಸಂಪಾದಕ್ವದ ಸಂಸ್ಥೆಯ ಗೃಹವಾರ್ತಾ ಪತ್ರಿಕೆ “ನ್ಯೂ ಹೊರೈಜನ್ಸ್” ಬಿಡುಗಡೆಗೊಳಿಸಿದರು.
ವಲಯ ಅಧಿಕಾರಿಯವರಾದ ಪ್ರಶಾಂತ್ ರೈಯವರು ಪ್ರಾಸ್ಥಾವಿಕವಾಗಿ ಮಾತನಾಡಿ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಪಡೆದ ಡೈಮಂಡ್ ಪ್ರಶಸ್ತಿಯನ್ನು ಶ್ಲಾಘಿಸಿ ನೂತನ ತಂಡವನ್ನು ಅಭಿನಂದಿಸಿದರು.
ನಿರ್ಗಮನ ಅಧ್ಯಕ್ಷೆ ಶ್ರೀಮತಿ ಸೌಮ್ಯ ಶೆಟ್ಟಿಯವರು ಸ್ವಾಗತಿಸಿ ತಮ್ಮ ಅಧಿಕಾರವಧಿಯಲ್ಲಿ ಸಹಕರಿಸಿದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಶ್ರೀಮತಿ ಡಾ. ಅನಿತಾ ರವಿಶಂಕರ್‌ರವರು ವಾರ್ಷಿಕ ವರದಿ ಮಂಡಿಸಿದರು.

ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶ್ರೀಮತಿ ಡಾ. ಅನಿತಾ ರವಿಶಂಕರ್‌ರವರು ತಮ್ಮ ಅಧಿಕಾರವಧಿಯಲ್ಲಿ ಹಲವಾರು ಜನಪರ ಸೇವಾ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದನ್ನು ಯಶಸ್ವಿಯಾಗಿ ಅನುಷ್ಠಾನಗಳಿಸಲು ಸರ್ವ ಸದಸ್ಯರ ಉತ್ಸಾಹ, ಪ್ರೋತ್ಸಾಹ, ಸಹಕಾರ ಬೆಂಬಲವನ್ನು ಕೋರಿದರು.
ಕುಮಾರಿ ತಪಸ್ಯ ರಾವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ಶ್ರೀಮತಿ ಲತಾ ವಿಕ್ರಮ್ ವಂಧಿಸಿದರು.
ಪದಾಧಿಕಾರಿಗಳ ವಿವರ: ಉಪಾಧ್ಯಕ್ಷೆ ಶ್ರೀಮತಿ ಪ್ರಫುಲ್ಲಾ ರೈ, ಚುನಾಯಿತ ಅಧ್ಯಕ್ಷ ಡಾ. ಅನಂತನ್, ಧಂಡಾಧಿಕಾರಿ ಶ್ರೀಮತಿ ಸಂಗೀತಾ ಆನಂತನ್, ಕೋಶಾಧಿಕಾರಿ ಜಯಪ್ರಕಾಶ್ ರೈ. ನಿರ್ದೇಶಕರು: ಸಂಸ್ಥೆ ಸೇವೆ ಶ್ರೀಮತಿ ರಾಜೀವಿ, ವೃತ್ತಿಪರ ಸೇವೆ ಶ್ರೀಮತಿ ವಾಣಿ ಲೋಕಯ್ಯ, ಸಮುದಾಯ ಸೇವೆ ಪ್ರಭಾಕರ್ ರೈ, ಅಂತರಾಷ್ಟ್ರೀಯ ಸೇವೆ ರವೀಂದ್ರ ಶೆಟ್ಟಿ, ಯುವಜನ ಸೇವೆ ಚಂದ್ರು ಹೆಗ್ಡೆ ಕಾರ್ಯದರ್ಶಿ ಉಪಸ್ಥಿತರಿದ್ದರು.

