ಕಾಂತಾವರ ಯಕ್ಷೋಲ್ಲಾಸ ಉದ್ಘಾಟನೆ : ಸಾಧಕನಿಗೆ ಮಾತ್ರ ಸಾಧ್ಯ -ಪಟ್ಲ ಸತೀಶ್ ಶೆಟ್ಟಿ

0
10

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಯಕ್ಷ ದೇಗುಲ ಸಂಸ್ಥೆವರಿಂದ ಯಕ್ಷೋಲ್ಲಾಸ 2025 ರನ್ನು ಜುಲೈ 20ರಂದು ಉದ್ಘಾಟಿಸಲಾಯಿತು. ಬಾರಾಡಿಬೀಡು ಸುಮತಿ ಆರ್ ಬಲ್ಲಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಗವತ ಯಕ್ಷಧ್ರುವ ಪಟ್ಲಾ ಸತೀಶ್ ಶೆಟ್ಟಿ ಮಾತನಾಡಿ ಕಳೆದ 23 ವರ್ಷಗಳಿಂದ ಜುಲೈ 23ರಂದು ಕಾರ್ಯಕ್ರಮವನ್ನು ಎಡೆಬಿಡದೆ ನಡೆಸಿಕೊಂಡು ಬರುತ್ತಿರುವ ಮಹಾವೀರ ಪಾಂಡಿ ಅವರ ಶ್ರಮ ಮೆಚ್ಚ ಬೇಕಾದುದು. ಇಂತಹ ಸಾಧನೆ ಸಾಧಕನಿಂದ ಮಾತ್ರ ಸಾಧ್ಯ ಇದೆ ಎಂದು ಅಭಿನಂದಿಸಿದರು. ಅಧ್ಯಾಪಕ ಬೇಲಾಡಿ ವಿಠಲಶೆಟ್ಟಿ ಶುಭಾಶಂಸನೆ ಗೈದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪುತ್ತೂರು ದಿ. ಶ್ರೀಧರ ಭಂಡಾರಿ ಸಂಸ್ಮರಣ ಪ್ರಶಸ್ತಿ ಪಡೆಯುತ್ತಿರುವ ಗುಂಡಿ ಮಜಲು ಗೋಪಾಲ ಭಟ್, ಬಾಯಾರು ದಿ. ಪ್ರಕಾಶ್ ಚಂದ್ರ ರಾವ್ ಸಂಸ್ಮರಣ ಪ್ರಶಸ್ತಿ ಪಡೆಯುತ್ತಿರುವ ಶಿವರಾಮಜೋಗಿ ಬಿ ಸಿ ರೋಡು, ಡಾ.ಕೆ.ಜೀವಂಧರ ಬಲ್ಲಾಳ್, ಮಹಾವೀರ ಪಾಂಡಿ, ಕೆ.ಶ್ರೀಪತಿ ರಾವ್, ಎಂ ದೇವಾನಂದ ಭಟ್, ಹಾಗೂ ಇತರರು ಉಪಸ್ಥಿತರಿದ್ದರು. ನಿರಂತರ ಹನ್ನೆರಡು ಗಂಟೆಗಳ ಯಕ್ಷಗಾನ ಬಯಲಾಟ, ತಾಳಮದ್ದಳೆ ಪ್ರಾರಂಭವಾಯಿತು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here