ತುಳುವ ಮಹಾಸಭೆ: ಮಲ್ಲೂರಿನಲ್ಲಿ ಮಾಹಿತಿ ಸಭೆ

0
123

ಮಲ್ಲೂರು: ನೀರುಮಾರ್ಗ ಮಲ್ಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ತುಳುವರ್ಲ್ಡ್ ಫೌಂಡೇಶನ್ (ರಿ)ಯ ಪ್ರೇರಣೆಯಿಂದ ತುಳುವ ಮಹಾಸಭೆ ಶಾಖೆಯ ರಚನೆ ಹಾಗೂ ತುಳುನಾಡನ್ ಕಳರಿ ತರಬೇತಿಯ ಪ್ರಾರಂಭ ಸಂಬಂಧಿಸಿದಂತೆ ವಿಶೇಷ ಮಾಹಿತಿ ಸಭೆ ನಡೆಯಿತು.

ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಅಳ್ವ ಅವರು ಮಾತನಾಡಿದರು, ತುಳುವ ಮಹಾಸಭೆಯ ಮೂಲ ಉದ್ದೇಶವನ್ನು ವಿವರಿಸಿ, “ಕಳರಿ ತರಬೇತಿಯು ಕೇವಲ ಯುದ್ಧಕಲೆ ಅಥವಾ ಶಾರೀರಿಕ ಶಕ್ತಿಗೆ ಮಾತ್ರ ಸೀಮಿತವಲ್ಲ; ಅದು ಆತ್ಮಸಂರಕ್ಷಣೆಯ ಮಾರ್ಗವಾಗಿದ್ದು, ವ್ಯಕ್ತಿತ್ವ ವಿಕಾಸದೊಂದಿಗೆ ಸಮಾಜಮುಖಿ ಚಟುವಟಿಕೆಗಳತ್ತ ಒಯ್ಯುವ ಶಕ್ತಿ ಹೊಂದಿದೆ” ಎಂದು ಹೇಳಿದರು.

ಕಾರ್ಯನಿರ್ವಾಹಕ ಸಂಚಾಲಕ ಜಿ.ಕೆ. ಹರಿಪ್ರಸಾದ ರೈ ಕಾರಮೊಗರು ಗುತ್ತು ಅವರು ಅವರು ಸಂಘಟನೆಯ ಮಹತ್ವವನ್ನು ಬಿಂಬಿಸುತ್ತಾ, “ಇದು ಸ್ಥಳೀಯರ ಮನಸ್ಸಿನಲ್ಲಿ ಚೈತನ್ಯ ಉಂಟುಮಾಡುವ ಒಂದು ಆತ್ಮಸಾಕ್ಷಾತ್ಕಾರದ ಹೋರಾಟ” ಎಂದು ಹೇಳಿದರು. ಶ್ರೀ ರಾಮಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ದೇವಿಪ್ರಸಾದ್ ಅವರು ಉಪಸ್ಥಿತರಿದ್ದರು.
ಸಭೆಯನ್ನು ಯುವ ನ್ಯಾಯವಾದಿ ಮತ್ತು ಸಂಘಟಕ ಸೋಹನ್ ಆಳ್ವ ಅವರು ಕಾರ್ಯಕ್ರಮ ನಿರ್ವಹಿಸಿದರು.

ಈ ವಿಶೇಷ ಸಭೆಯು ಮಲ್ಲೂರಿನ ನಾಡು-ನುಡಿಗೆ ಸಂಬಂಧಿಸಿದ ನಂಬಿಕೆಗಳಿಗೆ ಹೊಸ ಉಸಿರು ತುಂಬಿದಂತಾಯಿತು. ಬಹುತೇಕ ಯುವಜನರು ಕಳರಿ ತರಬೇತಿಗೆ ಆಸಕ್ತಿ ತೋರಿ, ಸಾಂಸ್ಕೃತಿಕ ಪುನರುತ್ಥಾನದತ್ತ ಮತ್ತೊಂದು ಹೆಜ್ಜೆ ಇಡಲು ಮುಂದಾದರು

LEAVE A REPLY

Please enter your comment!
Please enter your name here