ಬಂಟ್ವಾಳ: ದೇಶದ ಬಗ್ಗೆ ಬಹುದೊಡ್ಡ ನಿರೀಕ್ಷೆ ಮತ್ತು ಕಲ್ಪನೆಗಳೊಂದಿಗೆ ಹೋರಾಡಿ ದೇಶಗೋಸ್ಕರ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ಜ್ಞಾಪಿಸಬೇಕು ಭಾರತದ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ವೀರಪುರುಷರನ್ನು ನೆನೆದು, ಸಿಕ್ಕ ಸ್ವಾತಂತ್ರವನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ವಿದ್ಯಾಗಿರಿ ಬಂಟ್ವಾಳ ಇದರ ಸದಸ್ಯೆ ಅಲ್ಕಾ ಕೂಡಿಗೆ ಶೆಣೈ ಎಂದು ಹೇಳಿದರು.
ಅವರು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಇಲ್ಲಿ ನಡೆದ ೭೯ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಹರಿಪ್ರಸಾದ್ ಉಪಸ್ಥಿತರಿದ್ದರು. ಎನ್.ಸಿ.ಸಿ ಆರ್ಮಿವಿಂಗ್, ಎನ್.ಸಿ.ಸಿ ನೇವಲ್ ವಿಂಗ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ದೇಶ ಭಕ್ತಿಯನ್ನು ಬಿಂಬಿಸುವ ‘ಈಸೂರು ದಂಗೆ’ ಕಿರುಪ್ರಹಸನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಚೈತ್ರ ಶೆಟ್ಟಿ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ವೀಣಾ ದೇವಾಡಿಗ, ಎನ್.ಸಿ.ಸಿ ಆರ್ಮಿವಿಂಗ್ ಅಧಿಕಾರಿ ರವಿ, ಎನ್.ಸಿ.ಸಿ ನೇವಲ್ ವಿಂಗ್ ಅಧಿಕಾರಿ ರತ್ನಾಕರ ಗೌಡ, ಶಿಕ್ಷಕ -ಶಿಕ್ಷಕೇತರರು ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಾನ್ ಸಜಿತ್ ಸ್ವಾಗತಿಸಿ, ಮೇಧಾಶ್ರೀ ಮತ್ತು ಝೀಭಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರತ್ಯುಷ್ ಜೆ.ಎಂ ವಂದನೆಗೈದರು.

